ಲಿಮ್ಕಾ ದಾಖಲೆ ಬರೆದ ರಿಂಗ್‌ಚೈನ್

7

ಲಿಮ್ಕಾ ದಾಖಲೆ ಬರೆದ ರಿಂಗ್‌ಚೈನ್

Published:
Updated:
ಲಿಮ್ಕಾ ದಾಖಲೆ ಬರೆದ ರಿಂಗ್‌ಚೈನ್

ಕಾರವಾರ: ತಾಲ್ಲೂಕಿನ ಕಡವಾಡ ನಿವಾಸಿ ಮಿಲಿಂದ ಅಣ್ವೇಕರ 22 ಕ್ಯಾರೆಟ್‌ನ 970 ಮಿಲಿ ಗ್ರಾಂ. ಚಿನ್ನದಲ್ಲಿ 19.75 ಇಂಚು ಉದ್ದದ `ರಿಂಗ್‌ಚೈನ್' ತಯಾರಿಸಿದ್ದು, ಅವರ ಹೆಸರು ಲಿಮ್ಕಾ ದಾಖಲೆಗೆ ಸೇರಿದೆ.ಈ ಕುರಿತು ಅಣ್ವೇಕರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. `ಒಟ್ಟು 354 ರಿಂಗ್ ಒಳಗೊಂಡಿರುವ ಚೈನ್ ಸಿದ್ಧಪಡಿಸಲು 18 ಗಂಟೆ ಬೇಕಾಯಿತು' ಎಂದು ಅಣ್ವೇಕರ್ ಹೇಳಿದರು.`2003ರಲ್ಲಿ 960 ಮಿಲಿ ಗ್ರಾಂ. ಚಿನ್ನದಲ್ಲಿ ಮುತ್ತಿನ ಹರಳಿನ ನೆಕ್ಲೇಸ್ ನಿರ್ಮಿಸಿದ್ದು, ನೋಡಿ ದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಿದರ.ಹೀಗೆ ಕುತೂಹಲಕ್ಕಾಗಿ ಪ್ರಯೋಗ ಮಾಡುತ್ತ ಹೋದಾಗ ಈ ಸಾಧನೆ ಸಾಧ್ಯ ವಾಯಿತು' ಎಂದು ಅವರು ಸಂತಸ ವ್ಯಕ್ತಪಡಿಸಿದರು.

`ಮುಂದಿನ ದಿನಗಳಲ್ಲಿ ಆಭರಣ ತಯಾರಿಕೆಯಲ್ಲಿಯೇ ಗಿನ್ನಿಸ್ ದಾಖಲೆ ಬರೆಯುವ ಉದ್ದೇಶ ಹೊಂದಿದ್ದೇನೆ. ಅದಕ್ಕೆ ಪ್ರಯತ್ನ ಸಾಗುತ್ತಿದೆ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry