ಮಂಗಳವಾರ, ಜೂನ್ 15, 2021
21 °C

ಲೀಲಾದೇವಿ ಪ್ರಸಾದ್‌ಗೆ ವಸಿಷ್ಠ ಅರುಂಧತಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಯಿಂದ ಭಾರತೀಯ ಸಂಸ್ಕೃತಿ ನಶಿಸುತ್ತಿದೆ~ ಎಂದು  ಶಾಸಕ ರವಿಸುಬ್ರಮಣ್ಯ ಹೇಳಿದ್ದಾರೆ.

 

ನಗರದಲ್ಲಿ ಶನಿವಾರ ನಯನ ಸಭಾಂಗಣದಲ್ಲಿ ಸುಭದ್ರ ಭಾರತ ಲೋಕ ಕಲ್ಯಾಣ ಟ್ರಸ್ಟ್ ಯುಗಾದಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ದಂಪತಿಗಳ ಮೇಳ ಮತ್ತು ವಾರ್ಷಿಕ ಶ್ರೇಷ್ಠ ದಂಪತಿಗಳ `ವಸಿಷ್ಠ ಅರುಂಧತಿ ಪ್ರಶಸ್ತಿ~ ಪುರಸ್ಕಾರ ಸಮಾರಂಭದಲ್ಲಿ ಅವರು, `ಎಲ್ಲಾ ಕ್ಷೇತ್ರದಲ್ಲಿ ವಿದೇಶಿ ಸಂಸ್ಕೃತಿ ವ್ಯಾಪಕವಾಗಿ ತುಂಬಿಕೊಂಡಿದ್ದು, ದೇಶಿಯ ಸಂಸ್ಕೃತಿಯನ್ನು  ಕಾಣುವುದು ಅಪರೂಪವಾಗಿದೆ. ಇಂತಹ ಕಾಲದಲ್ಲಿ ಆದರ್ಶವಾಗಿರುವ ದಂಪತಿಗಳನ್ನು ಕರೆದು ಸನ್ಮಾನಿಸುವ ಟ್ರಸ್ಟ್‌ನ ಕಿರಣ ಅವರ ಕಾರ್ಯ ಶ್ಘಾಘನೀಯ~ ಎಂದು ಹೇಳಿದರು.ಸಮಾರಂಭದಲ್ಲಿ ರೇಣುಕಾ ಪ್ರಸಾದ್ ಮತ್ತು ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಅವರಿಗೆ ವಸಿಷ್ಠ ಅರುಂಧತಿ  ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರು ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಸಪ್ತಪಧಿ ತುಳಿದರು. ನಾಗೇಂದ್ರ ಪ್ರಸಾದ ಮತ್ತು ಶಕುಂತಲಾ, ಸುರೇಶ ಮತ್ತು ಭಾರ್ಗವಿ ಸುರೇಶ  ಮತ್ತು ಇನ್ನು ಕೆಲವು ದಂಪತಿಗಳನ್ನು ಸನ್ಮಾನಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಮಾತನಾಡಿ, `ಜೀವನದಲ್ಲಿ ಸಿಹಿ ಮತ್ತು ಕಹಿ ಇದ್ದರೇ ಜೀವನ ಸಾರ್ಥಕವಾಗುತ್ತದೆ. ನನ್ನ ಎಲ್ಲ  ಕಾರ್ಯಗಳಿಗೆ ಪತಿಯೇ ಬೆನ್ನೆಲುಬಾಗಿದ್ದಾರೆ.

 

ನಾನು ಸಚಿವೆಯಾಗಿದ್ದಾಗ ಆರಂಭವಾದ ಸಭಾಂಗಣದಲ್ಲೇ  ಪ್ರಶಸ್ತಿ ಸ್ವಿಕರಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ, ರಾಜರಾಜೇಶ್ವರಿನಗರ  ವಿಧಾನಸಭಾ ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.