ಲೀಲಾವತಿಗೆ ಅವಮಾನ!

7

ಲೀಲಾವತಿಗೆ ಅವಮಾನ!

Published:
Updated:

ಚೆನ್ನೈ: ಇಲ್ಲಿ ನಡೆದ ಭಾರತೀಯ ಚಿತ್ರರಂಗದ ಶತಮಾನೋತ್ಸವದ ಕೊನೆಯ ದಿನವಾದ ಮಂಗಳವಾರ ಕನ್ನಡದ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ, ನಟ ವಿನೋದ್ ರಾಜ್ ಅವರಿಗೆ ಸಭಾಂಗಣದ ಒಳಗೆ ಪ್ರವೇಶ ನೀಡದೆ ವಾಪಸ್‌ ಕಳಿಸಲಾಯಿತು.ಈ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಲೀಲಾವತಿ, ‘ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು   ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನಗೆ ಆಹ್ವಾನ ನೀಡಿತ್ತು. ಮಂಗಳವಾರದ ಸಮಾರೋಪ ಸಮಾರಂಭಕ್ಕೆ ತಡವಾಗಿ ಬರಲು ಹೇಳ­ಲಾಗಿತ್ತು.

ಅದರಂತೆ ಸಂಜೆ ನಾಲ್ಕು ಗಂಟೆಗೆ ಸ್ಥಳಕ್ಕೆ ತೆರಳಿದಾಗ ಪೊಲೀಸರು ಒಳಗೆ ಬಿಡಲಿಲ್ಲ. ನಮ್ಮ ಚಿತ್ರರಂಗಕ್ಕೆ ಸಂಬಂಧಿಸಿದವರಿಗೆ ಕರೆ ಮಾಡಿದರೇ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಇದು ತುಂಬಾ ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry