ಬುಧವಾರ, ಏಪ್ರಿಲ್ 14, 2021
24 °C

ಲೀಲಾವತಿ ಆಸ್ಪತ್ರೆ ಟ್ರಸ್ಟಿಗಳ ವಿರುದ್ಧ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬೈನ ಲೀಲಾವತಿ ಆಸ್ಪತ್ರೆಯ ಟ್ರಸ್ಟಿಗಳ ವಿರುದ್ಧ ಅಕ್ರಮ ಹಣ ಹೂಡಿಕೆ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ದಾಳಿಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.‘ಕೆಲವೆಡೆ  ದಾಳಿ ನಡೆಸಿದ್ದು ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ತಿಳಿಸಿದ್ದಾರೆ.

ವಕೀಲರಾದ ದೆಹಲಿ ನಿವಾಸಿ ಹರ್ಷ್ ರಘುವಂಶಿ ಅವರು ಆಸ್ಪತ್ರೆ ಟ್ರಸ್ಟಿಗಳಾದ ಪ್ರಬೋಧ್ ಮೆಹ್ತಾ, ರಷ್ಮಿ ಮೆಹ್ತಾ, ಚೇತನ್ ಮೆಹ್ತಾ ಮತ್ತು ಭಾವಿನ್ ಮೆಹ್ತಾ ಅವರು ಹಣ ದುರುಪಯೋಗ ಮಾಡಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದು ಈ ಕುರಿತು ಸರ್ಕಾರದ ನಿಲುವೇನು ಎಂದು ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನೇತೃತ್ವದ ಪೀಠ ಪ್ರಶ್ನಿಸಿದಾಗ ಸಾಲಿಸಿಟರ್ ಜನರಲ್ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.