ಬುಧವಾರ, ನವೆಂಬರ್ 13, 2019
23 °C

ಲುಂಗಿ, ಅಂಗಿಯಲ್ಲಿ ದೀಪಿಕಾ

Published:
Updated:

ಇದೇ ವರ್ಷ ತೆರೆಕಾಣಲಿರುವ ಚಿತ್ರವೊಂದರಲ್ಲಿ ದೀಪಿಕಾ ಪಡುಕೋಣೆ ಬಣ್ಣ ಬಣ್ಣದ ಲುಂಗಿ ಹಾಗೂ ಅಂಗಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ರೋಹಿತ್ ಶೆಟ್ಟಿ ನಿರ್ದೇಶನದ `ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ 27ರ ಹರೆಯದ ದೀಪಿಕಾ ಹಲವು ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಇದೀಗ `ಯೆ ಜವಾನಿ ಹೈ ದಿವಾನಿ' ಚಿತ್ರದಲ್ಲಿ ಕನ್ನಡಕಧಾರಿಯಾಗಿ ಕಾಣಿಸಿಕೊಂಡು ತಮ್ಮನ್ನು ಸಾಕಷ್ಟು ಪ್ರಯೋಗಕ್ಕೆ ಒಡ್ಡುತ್ತಿದ್ದಾರೆ.ತಮ್ಮ ಮಾಜಿ ಪ್ರಿಯಕರ ರಣಬೀರ್ ಕಪೂರ್ ಜತೆ ನಟಿಸಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಸಿನಿಮಾ ಮೇ 31ರಂದು ಬಿಡುಗಡೆಯಾಗುತ್ತಿದೆ. ಜತೆಗೆ ಸಂಜಯ್ ಲೀಲಾ ಬನ್ಸಾಲಿ ಅವರ `ರಾಮ್ ಲೀಲಾ' ಚಿತ್ರದಲ್ಲೂ ದೀಪಿಕಾ ದೇಸಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರತಿಕ್ರಿಯಿಸಿ (+)