ಲುಮಿಯಾ-610 ಮಾರುಕಟ್ಟೆಗೆ

ಮಂಗಳವಾರ, ಜೂಲೈ 23, 2019
25 °C

ಲುಮಿಯಾ-610 ಮಾರುಕಟ್ಟೆಗೆ

Published:
Updated:

ಬೆಂಗಳೂರು: ಈ ಮೊದಲೇ ಹೆಚ್ಚಿನ ಬೆಲೆಯ `ಲುಮಿಯಾ ಸರಣಿ~ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದ `ನೋಕಿಯ ಇಂಡಿಯ~, ಯುವಜನರನ್ನು ಹೆಚ್ಚು ಆಕರ್ಷಿಸಲು ಕಡಿಮೆ ಬೆಲೆಯ `ಲುಮಿಯಾ 610~ ಹ್ಯಾಂಡ್‌ಸೆಟ್ ಪರಿಚಯಿಸಿದೆ.ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಇರುವ, ಹೊಸ ಬಗೆಯ 4 ಅಪ್ಲಿಕೇಷನ್ ಒಳಗೊಂಡಿರುವ, ್ಙ 12,999 ಬೆಲೆಯ `ಲುಮಿಯಾ 610~ ಶನಿವಾರದಿಂದ ದೇಶದಾದ್ಯಂತ  ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದೆ ಎಂದು  `ನೋಕಿಯ ಇಂಡಿಯ~ ಮಾರುಕಟ್ಟೆ ವಿಭಾಗದ ನಿರ್ದೇಶಕ ವಿ.ರಾಮನಾಥ್ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೊಸ ಹ್ಯಾಂಡ್‌ಸೆಟ್‌ನ ವೈಶಿಷ್ಟ್ಯಗಳನ್ನು ಪರಿಚಯಿಸಿದ ಅವರು, ಈ ಮೊದಲೇ ಪರಿಚಯಿಸಿದ `ಲುಮಿಯಾ 800~ (ರೂ. 29,999) ಮತ್ತು `ಲುಮಿಯಾ 710~ (ರೂ. 15000) ಹ್ಯಾಂಡ್‌ಸೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಹೊಸ `ಲುಮಿಯಾ 610~ದಲ್ಲಿನ 5 ಮೆಗಾಪಿಕ್ಸೆಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ಫೇಸ್‌ಬುಕ್‌ಗೆ 28 ಸೆಕೆಂಡ್‌ಗಳಲ್ಲಿ ಅಪ್‌ಲೋಡ್ ಮಾಡಬಹುದು. ನೇರವಾಗಿ ನೋಕಿಯಾ ಸರ್ವರ್‌ಗೆ ಜೋಡಣೆಯಾಗಿರುವ `ಮ್ಯೂಸಿಕ್ ಸ್ಟೇಷನ್~ ಈ ಹ್ಯಾಂಡ್‌ಸೆಟ್‌ನ ಇನ್ನೊಂದು ವಿಶೇಷ. ಆಫ್‌ಲೈನ್‌ನಲ್ಲಿಯೂ `ಮಿಕ್ಸ್ ರೇಡಿಯೊ~ ಸೇವೆ ಪಡೆಯಬಹುದು.`ಗ್ರೂಪ್ ಫೋಟೊ~ ಅಪ್ಲಿಕೇಷನ್ ನೋಕಿಯದ ಹೊಸ ಸಂಶೋಧನೆಯಾಗಿದ್ದು, ಇದರಿಂದ ಉತ್ತಮ ಸಮೂಹ ಚಿತ್ರಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry