ಲೂಯಿ ಖುರ್ಷಿದ್‌ಗೆ ಕಲ್ಲೆಸೆತ; ಪಾರು

7

ಲೂಯಿ ಖುರ್ಷಿದ್‌ಗೆ ಕಲ್ಲೆಸೆತ; ಪಾರು

Published:
Updated:

ಫಾರೂಕಾಬಾದ್ (ಉತ್ತರಪ್ರದೇಶ) (ಐಎಎನ್‌ಎಸ್): ಈ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿ ಖುರ್ಷಿದ್ ಇಲ್ಲಿನ ಮತಗಟ್ಟೆಯೊಂದರ ಆವರಣದಲ್ಲಿದ್ದಾಗ ಅವರತ್ತ ಕಲ್ಲು ತೂರಿದ ಘಟನೆ ಭಾನುವಾರ ನಡೆಯಿತು.

ಆದರೆ ಲೂಯಿ ಅವರಿಗೆ ಯಾವುದೇ ಪೆಟ್ಟು ಬಿದ್ದಿಲ್ಲ. ಬೀಬಿಗಂಜ್ ಪ್ರಾಥಮಿಕ ಶಾಲೆ ಮತಗಟ್ಟೆಯ ಗೇಟ್‌ಗಳನ್ನು ಸಂಜೆ 5 ಗಂಟೆಯಾಗುತ್ತಿದ್ದಂತೆ ಮುಚ್ಚಲಾಯಿತು. ಆದರೆ ಅದಕ್ಕೆ ಮುನ್ನ ಬಂದು ಸರದಿಯಲ್ಲಿ ನಿಂತಿದ್ದವರನ್ನು ಒಳಕ್ಕೆ ಕರೆದುಕೊಂಡು ಹೋಗಿ ಮತ ಹಾಕಲು ಅವಕಾಶ ನೀಡಲಾಗಿತ್ತು. ಆಗ ಬಿಜೆಪಿ ಮತ್ತು ಬಿಎಸ್‌ಪಿ ಕಾರ್ಯಕರ್ತರು ಮತಗಟ್ಟೆ ಬಳಿಗೆ ಜಮಾಯಿತಿ ಅದೇ ಮತಗಟ್ಟೆ ಆವರಣದಲ್ಲಿದ್ದ ಲೂಯಿ ಖುರ್ಷಿದ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಂತದಲ್ಲಿ ಪ್ರತಿಭಟನಾಕಾರರು ಲೂಯಿ ಅವರೆಡೆಗೆ ಕಲ್ಲುಗಳನ್ನೂ ತೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry