ಮಂಗಳವಾರ, ಜೂನ್ 15, 2021
27 °C

ಲೆಕ್ಕಪತ್ರಾಧಿಕಾರಿಗಳ ಅನುಮತಿ ಇಲ್ಲದೇ ಚೆಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಬಿಬಿಎಂಪಿಯ ತೋಟಗಾರಿಕೆ ವಿಭಾಗದಲ್ಲಿ ಸುಮಾರು 68 ಲಕ್ಷ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಲೆಕ್ಕಪತ್ರಾಧಿಕಾರಿಗಳು ಅಂಗೀಕಾರವಿಲ್ಲದೇ ಚೆಕ್ ವಿತರಿಸಿದ್ದು, ಇದರಿಂದೆ ಪಾಲಿಕೆಯಲ್ಲಿ ಮತ್ತೊಂದು ಹಗರಣ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.ಲೆಕ್ಕಪತ್ರ ಸ್ಥಾಯಿ ಸಮಿತಿಯು ಸೋಮವಾರ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಲೆಕ್ಕಪತ್ರಗಳ ತಪಾಸಣೆ ಸಂದರ್ಭದಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ. ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಕ್ರಮಕೈಗೊಳ್ಳಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದ್ದರೂ, ಅದನ್ನು ಕಾರ್ಯಗತಗೊಳಿಸಿಲ್ಲ.ಸ್ವೀಕೃತಿ ಮತ್ತು ವೆಚ್ಚಗಳ ಲೆಕ್ಕಪತ್ರ ಸಮನ್ವಯವಾಗದೇ ಹಣಕಾಸನ್ನು ದುರ್ಬಳಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದು ಸ್ಪಷ್ಟವಾಗಿದೆ.ರಾಜ್ಯ ಲೆಕ್ಕಪತ್ರ ಇಲಾಖೆಯ ಮುಖ್ಯಪರಿಶೋಧಕರು ನೆಪಮಾತ್ರಕ್ಕೆ ಲೆಕ್ಕ ಪರಿಶೋಧನೆ ಮಾಡಿ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದಾರೆ.ಬಜೆಟ್ ಅನುದಾನವಾರು ಲೆಕ್ಕನಿರ್ವಹಣೆಯಲ್ಲಿ ಎಲ್ಲ ಮಾಹಿತಿಯನ್ನು ಕೇವಲ ಡಾಟಾ ಎಂಟ್ರಿ ಮಾದರಿಯಲ್ಲಿ ಮಾಡಲಾಗಿದೆ. ಇದರೊಂದಿಗೆ ಬಜೆಟ್ ಮ್ಯಾನುಯಲ್ ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ. ಸ್ಪಷ್ಟ ಮಾಹಿತಿ ಒದಗಿಸಲು ಸಮಯವನ್ನು ನಿಗದಿಪಡಿಸುವಂತೆ ಸಮಿತಿ ಆಯುಕ್ತರನ್ನು ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.