ಲೆಫ್ಟಿನೆಂಟ್ ಗವರ್ನರ್ ಅನ್ನು ಹಿಂದಕ್ಕೆ ಕರೆಸಿಕೊಳ್ಳಲಿ

7

ಲೆಫ್ಟಿನೆಂಟ್ ಗವರ್ನರ್ ಅನ್ನು ಹಿಂದಕ್ಕೆ ಕರೆಸಿಕೊಳ್ಳಲಿ

Published:
Updated:

ಪದುಚೇರಿ (ಪಿಟಿಐ): ಪುಣೆಯ ಕುದುರೆ ತಳಿ ಅಭಿವೃದ್ಧಿ ಕೇಂದ್ರದ ಮಾಲೀಕ ಹಸನ್ ಅಲಿ ಖಾನ್‌ಗೆ ಪಾಸ್‌ಪೋರ್ಟ್ ಕೊಡಿಸಿರುವ ಪ್ರಕರಣ ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿರುವ ಪದುಚೇರಿಯ ಲೆಫ್ಟಿನೆಂಟ್ ಗವರ್ನರ್ ಇಕ್ಬಾಲ್ ಸಿಂಗ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಎಐಎಡಿಎಂಕೆ ಭಾನುವಾರ ರಾಷ್ಟ್ರಪತಿಗಳನ್ನು ಆಗ್ರಹಿಸಿದೆ.‘ಲೆಫ್ಟಿನೆಂಟ್ ಗವರ್ನರ್ ಹುದ್ದೆಯು ಸಂವಿಧಾನದಲ್ಲಿ ಬಹಳ ಮಹತ್ವದ ಹುದ್ದೆಯಾಗಿದೆ. ಆ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿಯು ಆ ಹುದ್ದೆಗೆ ಕಳಂಕ ತರುವಂತೆ ವರ್ತಿಸಿದರೆ ಅದು ಖಂಡನಾರ್ಯ. ಆದ್ದರಿಂದ ಸಂವಿಧಾನಿಕ ಪಾವಿತ್ರ್ಯತೆಯನ್ನು ಉಳಿಸುವುದಕ್ಕಾಗಿಯಾದರೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಇನ್ನೆಡರು ಎರಡು ದಿನಗಳ ಒಳಗೆ ಸಿಂಗ್ ಅವರನ್ನು ವಾಪಸು ಕರೆಸಿಕೊಳ್ಳಬೇಕು’ ಎಂದು ಪುದುಚೇರಿ ಎಐಎಡಿಎಂಕೆ ಘಟಕದ ಕಾರ್ಯದರ್ಶಿ ಎ.ಅನ್‌ಲ್ಬಳಗನ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry