ಲೇಖಕಿಯರ ದೃಷ್ಟಿಕೋನ ಸಂಕುಚಿತ: ನೈಪಾಲ್

ಮಂಗಳವಾರ, ಜೂಲೈ 23, 2019
27 °C

ಲೇಖಕಿಯರ ದೃಷ್ಟಿಕೋನ ಸಂಕುಚಿತ: ನೈಪಾಲ್

Published:
Updated:

ಲಂಡನ್ (ಪಿಟಿಐ): `ನನ್ನ ಸಮನಾದ ಯಾವ ಲೇಖಕಿಯರೂ ಜಗತ್ತಿನಲ್ಲಿ ಇಲ್ಲ~ ಎಂದು ಹೇಳುವ ಮೂಲಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಇಂಗ್ಲಿಷ್ ಸಾಹಿತಿ ವಿ.ಎಸ್.ನೈಪಾಲ್ ಮತ್ತೊಂದು ವಿವಾದಕ್ಕೆ ತಿದಿ ಒತ್ತಿದ್ದಾರೆ.`ರಾಯಲ್ ಜಿಯಾಗ್ರಫಿಕ್ ಸೊಸೈಟಿ~ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಅವರು ಹೀಗೆ ಉತ್ತರಿಸಿದ್ದಾರೆ. ಅತ್ಯಂತ ಜನಪ್ರಿಯ ಹಾಗೂ ಅಪಾರ ಓದುಗ ಅಭಿಮಾನಿಗಳ ಆರಾಧ್ಯ ದೇವತೆ ಎನಿಸಿರುವ ಜೇನ್ ಆಸ್ಟಿನ್ ಕೂಡಾ ನನಗೆ ಸಮನಲ್ಲ ಎಂಬರ್ಥದ ಮಾತುಗಳನ್ನೂ ಅವರು ಹೇಳಿದ್ದಾರೆ. ಮಹಿಳೆಯರ ಆಲೋಚನೆ, ಭಾವನೆ ಮತ್ತು ದೃಷ್ಟಿಕೋನ ತೀರಾ ಸಂಕುಚಿತವಾದುದು. ಅವರು ಮನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೇ ಬರವಣಿಗೆಗೆ ಇಳಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry