ಲೇಖಕಿ ಬ್ಯಾನರ್ಜಿ ಹತ್ಯೆ ಪ್ರಕರಣ: ಇಬ್ಬರು ಉಗ್ರರ ಬಂಧನ

7

ಲೇಖಕಿ ಬ್ಯಾನರ್ಜಿ ಹತ್ಯೆ ಪ್ರಕರಣ: ಇಬ್ಬರು ಉಗ್ರರ ಬಂಧನ

Published:
Updated:

ಕಾಬೂಲ್(ಎಎಫ್‌ಪಿ): `ಡ್ರಾಮಾಟಿಕ್ ಎಸ್ಕೇಪ್ ಫ್ರಮ್ ದ ತಾಲಿಬಾನ್' ಕೃತಿ ರಚಿಸಿದ ಭಾರತ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಆಫ್ಘಾನಿಸ್ತಾನದ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.`ಬಂಧಿತ ಆರೋಪಿಗಳು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ' ಎಂದು ಪಾಕ್ಟಿಕಾ ಪ್ರಾಂತ್ಯದ ಗೌರ್ನರ್‌ ವಕ್ತಾರ ಮೊಖ್ಲಿಸ್ ಆಫ್ಘಾನ್ ತಿಳಿಸಿದ್ದಾರೆ.`ಪುಸ್ತಕ ಆಧರಿಸಿ ತಯಾರಿಸಿರುವ ಸಿನಿಮಾದಲ್ಲಿ ತಾಲಿಬಾನ್‌‌ ಅನ್ನು ಅವಮಾನಿಸಲಾಗಿದೆ. ಇದರಿಂದ ಆ ಮಹಿಳೆಯನ್ನು ಹತ್ಯೆ ಮಾಡುವಂತೆ ಆದೇಶವಾಗಿತ್ತು' ಎಂದು ಅವರು ತಪ್ಪೊಪ್ಪಿಗೆ ವೇಳೆ ತಿಳಿಸಿದ್ದಾರೆ.`ಜತೆಗೆ, ಆ ಮಹಿಳೆ ಮನೆಯಲ್ಲಿ ಅಂತರ್ಜಾಲ ಹೊಂದಿದ್ದು, ಭಾರತಕ್ಕಾಗಿ ಕೆಲಸ ನಿರ್ವಹಿಸುತ್ತಾ, ಗುಪ್ತಚರ ಕಾರ್ಯದಲ್ಲಿ ತೊಡಗಿದ್ದರು' ಎಂದು ಅವರು ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry