ಮಂಗಳವಾರ, ಜೂನ್ 15, 2021
21 °C

ಲೇಖಿ ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೇಖಿ ಕೃತಿಗಳ ಲೋಕಾರ್ಪಣೆ

ವಿಜಯನಗರ ಪ್ರತಿಭಾ ಮಹಿಳಾ ಸಮಾಜ ಇತ್ತೀಚೆಗೆ ರಾಜಾಜಿನಗರದ ಇಂಡಸ್ಟ್ರಿಯಲ್ ಟೌನ್‌ನ ನಂದಿ ಸಭಾಂಗಣದಲ್ಲಿ 12ನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿತ್ತು.ಹಿರಿಯ ಸಾಹಿತಿ ಈ.ಚಿ. ಶಾಂತವೀರಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಲೇಖಿ (ಲಕ್ಷ್ಮೀಕಾಂತಮ್ಮ) ಅವರ ಐದು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಇಂದು ಸಾಹಿತ್ಯ ಕ್ಷೇತ್ರದತ್ತ ಯುವಕರ ಚಿತ್ತ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಲೇಖಿ ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯ ಹೊರಬರಲಿ ಎಂದು ಶಾಂತವೀರಯ್ಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.ಕೆ.ಎಂ.ನಾಗಲಕ್ಷ್ಮಿ ವೀರೇಶ್, ತ್ರಿವೇಣಿ ಶಿವಕುಮಾರ್, ನಾಗರಾಜ ಜಗನ್ನಾಥ್, ಜಿ.ವಿ. ನರಸಿಂಹಮೂರ್ತಿ, ಡಿ.ಎನ್.ಮಠ ಮತ್ತಿತರರು ಉಪಸ್ಥಿತರಿದ್ದರು. ರಂಗ ಶಿಬಿರ ತಂಡದ ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.