ಶನಿವಾರ, ಏಪ್ರಿಲ್ 17, 2021
33 °C

ಲೇಡಿ ಹಾಸ್ಪಿಟಲ್ಸ್ ಮಿಡ್ ನೈಟ್ ಕ್ಲಿನಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ತ್ರೀಯರಿಗೆ ಮೀಸಲಾದ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಕೇಂದ್ರ ‘ಲೇಡಿ ಹಾಸ್ಪಿಟಲ್ಸ್’ ವಿವಿಧ ರೋಗ ತಜ್ಞರ ಸಲಹೆ ಮತ್ತು ಸ್ತ್ರೀಯರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ‘ಮಿಡ್ ನೈಟ್ ಕ್ಲಿನಿಕ್’ ನಡೆಸುವ ಮೂಲಕ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.‘ಸ್ತ್ರೀಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಲವು ಬಗೆಯ ಅಡ್ಡಿ ಆತಂಕಗಳಿವೆ. ಈ ಪೈಕಿ ಸಮಯದ ಅಭಾವ ಬಹಳ ಮುಖ್ಯವಾದುದು. ಅದಕ್ಕಾಗಿ ಅವರಿಗೆ ಸೂಕ್ತ ಪ್ರತ್ಯೇಕ ಸಮಯ ನಿಗದಿಪಡಿಸಿದ್ದು ಬಿಡುವಾಗಿ ವೈದ್ಯರನ್ನು ಕಂಡು ಆರೋಗ್ಯದ ಸಮಸ್ಯೆಗಳನ್ನು ಚರ್ಚಿಸಬಹುದು’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿದ್ಯಾನಂದ ಗುರುಮೂರ್ತಿ.ಮಂಗಳವಾರ ಸಂಜೆ 7 ರಿಂದ ರಾತ್ರಿ 12ರ ವರೆಗೂ ತೆರೆದಿರುವ ‘ಮಿಡ್ ನೈಟ್ ಕ್ಲಿನಿಕ್’ನಲ್ಲಿ ಪ್ರಸೂತಿ, ಸೌಂದರ್ಯ, ಪ್ರಸೂತಿ ಶಸ್ತ್ರಚಿಕಿತ್ಸೆ, ಯೂರೋ ಗೈನಕಾಲಜಿ, ಬಂಜೆತನ, ಲ್ಯಾಪ್ರೊಸ್ಕೊಪಿಕ್ ಶಸ್ತ್ರಚಿಕಿತ್ಸೆ ತಜ್ಞರು, ಗ್ಯಾಸ್ಟ್ರೋ ಇಂಟೆಸ್ಟಿನಲ್ ಮತ್ತು ಮಕ್ಕಳ ಚಿಕಿತ್ಸಾ ತಜ್ಞರು ಸಲಹೆ ಮಾರ್ಗದರ್ಶನ ನೀಡಲು ಸಜ್ಜಾಗಿರುತ್ತಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮಿಡ್ ನೈಟ್ ಕ್ಲಿನಿಕ್ ಮುಂದೆ ನಿಯಮಿತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಜ್ಞ ವೈದ್ಯೆ ಡಾ. ಜಯಂತಿ ತುಮ್ಸಿ ಹೇಳುತ್ತಾರೆ.

ಸ್ಥಳ: 46ನೇ ಕ್ರಾಸ್, ಜಯನಗರ 5ನೇ ಬ್ಲಾಕ್.

ದೂ. 4265 9999. ಮಾಹಿತಿಗೆ:
www.theladyhospitals.com.ಸಾಗರ್ ಆಸ್ಪತ್ರೆ

ಮಂಗಳವಾರ ಕುಮಾರಸ್ವಾಮಿ ಬಡಾವಣೆಯ ಸಾಗರ್ ಆಸ್ಪತ್ರೆ ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದೆ. ಮಧುಮೇಹ, ಸ್ಥೂಲಕಾಯ, ಪ್ರಸೂತಿ ಮತ್ತು ಸ್ತ್ರೀರೋಗ, ದಂತ, ಎಲುವು ಮತ್ತು ಮೂಳೆ, ಥೈರಾಯ್ಡೆ ತಜ್ಞರು ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಮಾರ್ಚ್ 31ರ ವರೆಗೆ ‘ಸಂಪೂರ್ಣ ಆರೋಗ್ಯ ತಪಾಸಣೆ’ ಪ್ಯಾಕೇಜ್ ಶುಲ್ಕದಲ್ಲಿ ಶೇ 30ರಷ್ಟು ರಿಯಾಯ್ತಿ ದೊರೆಯಲಿದೆ.

ನೋಂದಣಿಗೆ:  4299 9999 (ವಿಸ್ತರಣೆ) 188.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.