ಮಂಗಳವಾರ, ಜೂನ್ 22, 2021
27 °C

ಲೈಂಗಿಕ ಕಿರುಕುಳ ತಡೆಗೆ ಅರಿವು ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಯುವ ಬಗ್ಗೆ ಅರಿವು ಮೂಡಿಸಲು ಸೊಸೈಟಿ ಫಾರ್‌ ಹ್ಯೂಮನ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ (ಎಸ್‌ಎಚ್‍­ಆರ್‍ಎಂ) ಸಂಸ್ಥೆಯು ಮಾರ್ಚ್‌ 27ರಂದು ನಗರದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ.ಕೋರಮಂಗಲ ಮೂರನೇ ಹಂತದ ಗ್ರಾಂಡ್ ಮಕ್ರ್ಯೂರ್‌ ಹೋಟೆಲ್‌ನಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30 ರವರೆಗೆ ಕಾರ್ಯಾಗಾರ ನಡೆಯಲಿದೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆಯಂತಹ ಘಟನೆಗಳನ್ನು ತಡೆಯಲು ತೆಗೆದು­ಕೊಳ್ಳ­ಬೇಕಾದ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ತಜ್ಞರು ಮಾತನಾಡಲಿದ್ದಾರೆ.ಲೈಂಗಿಕ ಕಿರುಕುಳ ತಡೆ ಕಾನೂನು ಹಾಗೂ ಪರಿಣಾಮ­ಗಳು, ಮಹಿಳಾ ಕಾರ್ಮಿಕರ ರಕ್ಷಣೆಯಲ್ಲಿ ಮಾಲೀಕರ ಜವಾಬ್ದಾರಿಗಳ ಬಗ್ಗೆ ತಜ್ಞರಿಂದ ಸಲಹೆ ಪಡೆದು­ಕೊಳ್ಳ­ಬಹುದು. ಜತೆಗೆ ಆಂತರಿಕ ದೂರು ಸಮಿತಿಯ (ಐಸಿಸಿ) ಕಾರ್ಯನಿರ್ವಹಣೆ ಹಾಗೂ ಆಂತರಿಕ ತನಿಖೆಯ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ಸಿಗಲಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಸಂಸ್ಥೆಯ ವೆಬ್‌ಸೈಟ್‌  ವಿಳಾಸ: www.shrm.org

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.