ಲೈಂಗಿಕ ಕಿರುಕುಳ ತಡೆಗೆ ದೂರು ನಿರ್ವಹಣಾ ಸಮಿತಿ

7

ಲೈಂಗಿಕ ಕಿರುಕುಳ ತಡೆಗೆ ದೂರು ನಿರ್ವಹಣಾ ಸಮಿತಿ

Published:
Updated:

ಚಾಮರಾಜನಗರ: ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗೆ ದೂರು ನಿರ್ವಹಣಾ ಸಮಿತಿ ರಚಿಸಲಾಗಿದೆ. ಎ, ಬಿ, ಸಿ ಮತ್ತು ಡಿ ಗುಂಪಿನ ಅಧಿಕಾರಿ, ಸಿಬ್ಬಂದಿ ಒಳಗೊಂಡ ಒಟ್ಟು 9 ಸದಸ್ಯರ ದೂರು ನಿರ್ವಹಣಾ ಸಮಿತಿ ರಚನೆಗೊಂಡಿದೆ. ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎನ್.ರೋಹಿಣಿ ಆಯ್ಕೆ ಯಾಗಿದ್ದಾರೆ. ಜಿಲ್ಲಾ ಖಜಾನೆ ಇಲಾಖೆಯ ಲೆಕ್ಕಿಗ ದೇವನಾಯಕ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.ಸಹಕಾರ ಇಲಾಖೆಯ ಉಪ ನಿಬಂಧಕ ಶಿವಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಾಲತಿ, ವಾರ್ತಾ ಇಲಾಖೆಯ ಬೆರಳಚ್ಚುಗಾರರಾದ ಗಾಯತ್ರಿ, ಭೂದಾಖಲೆಗಳ ಇಲಾಖೆಯ ‘ಡಿ’ ವೃಂದದ ನೌಕರ ದೇವಯ್ಯ, ಜಿಲ್ಲಾಧಿಕಾರಿ ಕಾರ್ಯಾಲಯದ ‘ಡಿ’ ವೃಂದದ ನೌಕರರಾದ ಗಾಯತ್ರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಹಾಯಕಿ ಧನಲಕ್ಷ್ಮೀ(ನಾಮ ನಿರ್ದೇಶನ) ಸಮಿತಿಯ ಸದಸ್ಯರಾಗಿದ್ದಾರೆ.ಲೈಂಗಿಕ ಕಿರುಕುಳ ಸಂಬಂಧ ದೂರುಗಳಿದ್ದರೆ ದೂರು ನಿರ್ವಹಣಾ ಸಮಿತಿಯ ಅಧ್ಯಕ್ಷರು, ಕೊಠಡಿ ಸಂಖ್ಯೆ 218, ಎರಡನೇ ಮಹಡಿ, ಜಿಲ್ಲಾಡಳಿತ ಭವನ- ಇಲ್ಲಿಗೆ ಮಹಿಳೆಯರು ದೂರು ಸಲ್ಲಿಸಬಹುದು. ಅಥವಾ  ಸದಸ್ಯ ಕಾರ್ಯದರ್ಶಿ ಗೂ ದೂರು ನೀಡಬಹುದು ಎಂದು ಸಮಿತಿಯ ಅಧ್ಯಕ್ಷೆ ರೋಹಿಣಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry