ಲೈಂಗಿಕ ಕಿರುಕುಳ: ತಪ್ಪೊಪ್ಪಿಕೊಂಡ ಆರೋಪಿ

7

ಲೈಂಗಿಕ ಕಿರುಕುಳ: ತಪ್ಪೊಪ್ಪಿಕೊಂಡ ಆರೋಪಿ

Published:
Updated:

ಬೆಂಗಳೂರು: ಮಗುವಿಗೆ ಒಂದು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದುದಾಗಿ ನಾಗರಬಾವಿಯ ಸೇಂಟ್ ಸೋಫಿಯಾ ಶಾಲೆ ವಾಹನದ ಚಾಲಕ ಸಾಬಣ್ಣ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.`ಚಾಕೋಲೆಟ್ ಕೊಡಿಸುವುದಾಗಿ ಮಗುವನ್ನು ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ, ಲೈಂಗಿಕ ಕಿರುಕುಳ ನೀಡಿ ಈ ವಿಷಯವನ್ನು ಯಾರಿಗೂ ಹೇಳದಂತೆ ಮಗುವಿಗೆ ಬೆದರಿಕೆ ಹಾಕಿದ್ದೆ ಎಂದು ಸಾಬಣ್ಣ ಹೇಳಿದ್ದಾನೆ. ಆರೋಪಿಯನ್ನು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದರು.ಮಗುವಿನ ಜನನಾಂಗದಿಂದ ತೆಗೆದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ಎಫ್‌ಎಸ್‌ಎಲ್ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ' ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry