ಲೈಂಗಿಕ ಕಿರುಕುಳ: ಯೆಹೂದಿ ಗುರು ಬಂಧನ

7

ಲೈಂಗಿಕ ಕಿರುಕುಳ: ಯೆಹೂದಿ ಗುರು ಬಂಧನ

Published:
Updated:

ನ್ಯೂಯಾರ್ಕ್ (ಎಎಫ್‌ಪಿ): ಇಲ್ಲಿನ ಸಂಪ್ರದಾಯಸ್ಥ ಯೆಹೂದಿ ಧಾರ್ಮಿಕ ನಾಯಕರೊಬ್ಬರು ತಮ್ಮ ರಕ್ಷಣೆಯಲ್ಲಿದ್ದ ಬಾಲಕಿಗೆ ಸತತ ಮೂರು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಘಟನೆ ಬಹಿರಂಗಗೊಂಡಿದೆ.54 ವರ್ಷದ ನೆಷೆಮ್ಯಾ ವೆಬರ್‌ಮನ್ ಈ ವ್ಯಕ್ತಿಯಾಗಿದ್ದು, 59 ಆರೋಪಗಳ ಅಡಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಈ ಅಪರಾಧಗಳಿಗಾಗಿ ಅವರಿಗೆ 117 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಮಗುವಿನ ಮೇಲೆ ಅತ್ಯಾಚಾರ ಮಾಡಿರುವುದು ಗಂಭೀರ ಅಪರಾಧವಾಗಿದ್ದು, ಆ ಕೃತ್ಯಕ್ಕಾಗಿ 25 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ.ವೆಬರ್‌ಮನ್ ತಪ್ಪಿತಸ್ಥರೆಂದು ಘೋಷಿಸಿದ ತಕ್ಷಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜನವರಿ 9ರಂದು ಶಿಕ್ಷೆ ಪ್ರಕಟಿಸಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry