ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಥಳಿತ

7

ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಥಳಿತ

Published:
Updated:

ಭದ್ರಾವತಿ: ತಾಲ್ಲೂಕಿನ ಸಂಕ್ಲೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನನ್ನು ಗ್ರಾಮಸ್ಥರು ಥಳಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.  ಪಾಲಾಕ್ಷಪ್ಪ (56) ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ. ಈತ ಕಳೆದ ಕೆಲವು ದಿನಗಳಿಂದ ಶಾಲೆಗೆ ಮದ್ಯಪಾನ ಮಾಡಿ ಬರುತ್ತಿದ್ದನೆಂದು ಹೇಳಲಾಗಿದ್ದು, 4 ಮತ್ತು 5 ನೇ ತರಗತಿಯ ವಿದ್ಯಾರ್ಥಿನಿಯರ ಸೊಂಟ, ಮೈ, ಕೈ ಮುಟ್ಟುತ್ತಿದ್ದನೆಂದು ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು.ಗ್ರಾಮಸ್ಥರು ಮತ್ತು ಪೋಷಕರು ಶಿಕ್ಷಕನನ್ನು ಥಳಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರುಪಡಿಸಿ, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ವಿಷಯ ತಿಳಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ಆರೋಪಿ ಪಾಲಾಕ್ಷಪ್ಪನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವಂತೆ ಒತ್ತಾಯಿಸಿದರು.ಇದಕ್ಕೆ ಗ್ರಾಮಸ್ಥರು ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಮುಂದೆ ಈ ಶಿಕ್ಷಕ ಯಾವುದೇ ಶಾಲೆಯಲ್ಲಿಯೂ ಪಾಠ ಮಾಡಬಾರದು ಎಂಬ ನಿಬಂಧನೆಯ ಹಿನ್ನಲೆಯಲ್ಲಿ ಶಿಕ್ಷಕ ಸ್ವಯಂ ನಿವೃತ್ತಿ ಮುಚ್ಚಳಿಕೆ ಬರೆದುಕೊಟ್ಟ ಮೇರೆಗೆ ಅವನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry