ಭಾನುವಾರ, ಮೇ 22, 2022
21 °C

ಲೈಂಗಿಕ ಕ್ರಿಯೆಗೆ ರೋಬೋಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಲೆಂಡ್ (ಐಎಎನ್‌ಎಸ್): ಭವಿಷ್ಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಹ ರೋಬೋಟ್, ಬಾರ್‌ಗಳಲ್ಲಿ ರೋಬೋಟ್ ಸಿಬ್ಬಂದಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯೂಜಿಲೆಂಡ್‌ನ ಪ್ರವಾಸೋದ್ಯಮದ ಭವಿಷ್ಯಕಾರೊಬ್ಬರು ಹೇಳಿದ್ದಾರೆ.

ಲೈಂಗಿಕ ಕಾರ್ಯಕರ್ತೆ(ರ್ತ) ರೋಬೋಟ್‌ಗಳು ಬಳಕೆ ಭವಿಷ್ಯದಲ್ಲಿ ಸಾಮಾನ್ಯ ಸಂಗತಿಯಾಗಲಿದೆ. ಇವುಗಳಿಂದ ಎಚ್‌ಐವಿ ಸೋಂಕು ಹರಡುವ ಭೀತಿ ಕೂಡ ಇಲ್ಲ ಎಂದು ವೆಲಿಂಗ್ಟನ್ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಭವಿಷ್ಯಕಾರ ಇಯಾನ್ ಯೋಮನ್ ಅಭಿಪ್ರಾಯಪಟ್ಟಿದ್ದಾರೆ.

ರಿಮೋಟ್ ನಿಯಂತ್ರಿತ ರೋಬೋಟ್‌ಗಳಿಂದ ಬಾರ್ ಮತ್ತು ಹೋಟೆಲ್‌ಗಳಲ್ಲಿ ಪರಿಚಾರಿಕೆ ಕೂಡ ಸಾಧ್ಯ. ಇವುಗಳ ಬಳಕೆಯಿಂದ ಕಾರ್ಮಿಕರ ವೆಚ್ಚ ತಗ್ಗಲಿದ್ದು, ಪ್ರವಾಸೋದ್ಯಮ ಸಂಘಟಕರು/ಪ್ರವರ್ತಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. 2050ರ ಹೊತ್ತಿಗೆ ಹೊಸರೀತಿಯ ಒಳಾಂಗಣ ಪ್ರವಾಸೋದ್ಯಮ ಹೆಚ್ಚು ಪ್ರಚಲಿತವಾಗಲಿದೆ. ಸರ್ಕಸ್, ಗಾಲ್ಫ್  ಅಂಗಳ, ಕಡಲಯಾನದ ಹಡಗುಗಳು ಒಳಾಂಗಣ ಪ್ರವಾಸೋದ್ಯಮದಲ್ಲಿ ಕಾಣಿಸಿಕೊಂಡರೆ ಅಚ್ಚರಿ ಇಲ್ಲ. ಇದರಿಂದ ಹೋಟೆಲ್ ರೂಂಗಳ ಒಳಾಂಗಣ ವಿನ್ಯಾಸದಲ್ಲೂ ಗಣನೀಯ ಬದಲಾವಣೆ ಆಗಲಿದೆ ಎಂಬ ಅಂಶಗಳು ಪ್ರವಾಸೋದ್ಯಮ ಕುರಿತು ಸಮಾವೇಶವೊಂದರಲ್ಲಿ ಮಂಡನೆಯಾದವು ಎಂದು ಯೋಮನ್ ತಿಳಿಸಿದ್ದಾರೆ.

`ಭವಿಷ್ಯದಲ್ಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡಲಿದ್ದು, ಇದಕ್ಕೆ ರೋಬೋಟ್ ಬಳಕೆ ಪರ್ಯಾಯ ಮಾರ್ಗೋಪಾಯವಾಗಲಿದೆ. ತಂತ್ರಜ್ಞಾನದಿಂದ ಹೋಟೆಲ್‌ಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ. ಗ್ರಾಹಕರ ಇಚ್ಛೆ ಮತ್ತು ಅವರ ಮನಸ್ಥಿತಿಗೆ ತಕ್ಕಂತೆ ಕೋಣೆಗಳ ವಿನ್ಯಾಸ, ಬಣ್ಣದಲ್ಲಿ ಬದಲಾವಣೆ, ಬಯಸಿದಂತಹ ಮೆತ್ತನೆಯ ಹಾಸಿಗೆ... ಎಲ್ಲವೂ ಸಾಧ್ಯ~ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.