ಲೈಂಗಿಕ ಹಗರಣದಲ್ಲಿ ಮತ್ತೊಬ್ಬ ನ್ಯಾಯಮೂರ್ತಿ

7

ಲೈಂಗಿಕ ಹಗರಣದಲ್ಲಿ ಮತ್ತೊಬ್ಬ ನ್ಯಾಯಮೂರ್ತಿ

Published:
Updated:

ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಗಂಗೂಲಿ  ಅವರ ಲೈಂಗಿಕ ಕಿರುಕುಳ ಹಗರಣ ಜನಮಾನಸದಿಂದ ಮಾಸುವ ಮುನ್ನವೇ ಸುಪ್ರೀಂಕೋರ್ಟ್‌ನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ  ಲೈಂಗಿಕ ಹಗರಣದಲ್ಲಿ ಸಿಲುಕಿದ್ದಾರೆ.ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿರುದ್ಧ  ಕಾನೂನು ತರಬೇತಿ ವಿದ್ಯಾರ್ಥಿನಿಯೊಬ್ಬಳು ಸುಪ್ರೀಂ­ಕೋರ್ಟ್‌ನಲ್ಲಿ ಲೈಂಗಿಕ ಕಿರುಕುಳದ ಮೊಕದ್ದಮೆ ದಾಖಲಿಸಿದ್ದಾಳೆ.‘2011ರಲ್ಲಿ ಈ ಘಟನೆ ನಡೆದಿದೆ. ಆಗ ಅವರು ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿಯಾಗಿದ್ದರು. ಈಗ ನ್ಯಾಯ­ಮಂಡ­ಳಿಯೊಂದರ ಅಧ್ಯಕ್ಷರಾ­ಗಿದ್ದಾರೆ’ ಎಂದು ಸುದ್ದಿವಾಹಿನಿ ವರದಿ ಮಾಡಿದೆ.ಆದರೆ, ನ್ಯಾಯಮೂರ್ತಿ ಗಂಗೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 5ರಂದು ಸುಪ್ರೀಂಕೋರ್ಟ್‌ ಅಂಗೀಕ­ರಿ­ಸಿದ ನಿರ್ಣಯದ ಪ್ರಕಾರ ಈ ಪ್ರಕ­ರ­ಣದಲ್ಲಿ ಮಧ್ಯೆ ಪ್ರವೇಶಿಸಲು ಸುಪ್ರೀಂ­ಕೋರ್ಟ್‌ ನಿರಾಕರಿಸಿದೆ.ಸುಪ್ರೀಂಕೋರ್ಟ್‌ನ ಈ ನಿರ್ಣವನ್ನು ಪ್ರಶ್ನಿಸಿ ಕಾನೂನು ವಿದ್ಯಾರ್ಥಿನಿ ಮೇಲ್ಮನವಿ ಸಲ್ಲಿಸಿದ್ದಾಳೆ.ಕಾನೂನಿನ ಅಡಿ ನ್ಯಾಯ ಪಡೆಯಲು ಆಕೆ ಸಂಪೂರ್ಣ ಸ್ವತಂತ್ರಳು ಎಂದು ಕೋರ್ಟ್‌ ಹೇಳಿದೆ ಎನ್ನಲಾಗಿದೆ.ಈಕೆ ಕೂಡ ಗಂಗೂಲಿ ವಿರುದ್ಧ ಲೈಂಗಿಕ ಆರೋಪ ಮಾಡಿದ್ದ ಮೊದಲಿನ ವಿದ್ಯಾರ್ಥಿನಿಯಂತೆ ಪಶ್ಚಿಮ ಬಂಗಾಳ ಕಾನೂನು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿನಿ.ಗಂಗೂಲಿ ಪ್ರಕರಣದಲ್ಲಿ ವಿದ್ಯಾರ್ಥಿ­ನಿಯ ಪರ ನಿಂತಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌ ಕೂಡ ಈಗ ಈ ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry