ಲೈನ್ ಹೊಡೀರಿ...

7

ಲೈನ್ ಹೊಡೀರಿ...

Published:
Updated:
ಲೈನ್ ಹೊಡೀರಿ...

ಬಿಗ್ ಎಫ್‌ಎಂ  92.7 ಲೈನ್ ಹೊಡೀರಿ  ಎಂಬ ನೂತನ ಕಾರ್ಯಕ್ರಮ ಆರಂಭಿಸಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಪುರುಷ ಶ್ರೋತೃಗಳು ಸ್ಯಾಂಡಲ್‌ವುಡ್ ನಾಯಕಿಯರೊಂದಿಗೆ ಹರಟೆ ಮಾತುಗಳನ್ನಾಡಬಹುದು.ಲೈನ್ ಹೊಡೀರಿ ಕಾರ್ಯಕ್ರಮ ಸೋಮವಾರದಿಂದ (ಫೆ.20) ಆರಂಭವಾಗಲಿದ್ದು, ಸಂಜೆ 5ರಿಂದ 9ರವರೆಗೆ ಪ್ರಸಾರವಾಗಲಿದೆ. ಮೊದಲ ವಾರ ರಾಗಿಣಿ ಹಾಗೂ ನಂತರ ರಮ್ಯೋ ಜತೆ ಶ್ರೋತೃಗಳು ತುಂಟತನದಿಂದ ಮಾತನಾಡಬಹುದು. ಲೈನ್ ಹೊಡೀರಿ  ಕಾರ್ಯಕ್ರಮ ನೋ ಟೆನ್ಷನ್ ಕಾರ್ಯಕ್ರಮದ ಭಾಗವಾಗಿದೆ. ಇದು ಆರು ವಾರಗಳ ಕಾಲ ನಡೆಯಲಿದ್ದು, ಇದರಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ಪ್ರಿಯಾಮಣಿ, ಪೂಜಾ ಗಾಂಧಿ, ಐಂದ್ರಿತಾ ರೇ, ನಿಧಿ ಸುಬ್ಬಯ್ಯ ಹಾಗೂ ಶರ್ಮಿಳಾ ಮಾಂಡ್ರೆ ಪಾಲ್ಗೊಳ್ಳಲಿದ್ದಾರೆ.ಈ ಕಾರ್ಯಕ್ರಮವನ್ನು ಆರ್‌ಜೆ ರೋಹಿತ್ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶ್ರೋತೃಗಳಿಗೆ ಒಂದು ವಿಷಯವನ್ನು ನೀಡಲಾಗುತ್ತದೆ. ಆ ವಿಷಯವನ್ನು ಆಧಾರವಾಗಿಟ್ಟುಕೊಂಡು ನಾಯಕಿಯರೊಂದಿಗೆ ಮಾತನಾಡಬೇಕು. ಅಂತಿಮವಾಗಿ ನಾಯಕಿಯರು ತಮ್ಮಂದಿಗೆ ತುಂಟತನದಿಂದ ಮಾತನಾಡಿದ ಶ್ರೋತೃಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ವಿಜೇತರ ಹೆಸರನ್ನು ಆಯಾ ವಾರದ ಅಂತ್ಯದಲ್ಲಿ ಘೋಷಿಸಲಾಗುವುದು. ವಿಜೇತರು ತಾವು ಹರಟಿದ ನಾಯಕಿಯನ್ನು ಭೇಟಿ ಮಾಡುವ ಹಾಗೂ ಹರಟುವ ಅವಕಾಶ ಲಭಿಸಲಿದೆ.92.7 ಎಫ್‌ಎಂನ ಮಹಿಳಾ ಶ್ರೋತೃಗಳು ಸುಮ್ಮನೆ ಕೂರಬೇಕಾಗಿಲ್ಲ. ಮಹಿಳಾ ಶ್ರೋತೃಗಳು ನಟಿಯರ ಉತ್ತಮ ಸ್ನೇಹಿತರಂತೆ ನಟಿಸಬಹುದು. ವಿಜೇತರ ಆಯ್ಕೆಯಲ್ಲಿ ನಾಯಕಿಗೆ ಸಹಕರಿಸಬಹುದು. ಆ ದಿನದ ಉತ್ತಮ ಆಯ್ಕೆಯಲ್ಲಿ ಸಹಕರಿಸಿದ ಒಬ್ಬ ಮಹಿಳಾ ಶ್ರೋತೃಗೆ ಕಾರ್ಯಕ್ರಮದಲ್ಲಿ ನಾಯಕಿಯನ್ನು ಭೇಟಿ ಮಾಡುವ ಹಾಗೂ ಮಾತನಾಡುವ ಅವಕಾಶ ಲಭಿಸಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry