ಬುಧವಾರ, ಡಿಸೆಂಬರ್ 11, 2019
20 °C

ಲೈಫ್‌ಸ್ಟೈಲ್ ಆಫ್‌ಸೇಲ್

Published:
Updated:
ಲೈಫ್‌ಸ್ಟೈಲ್ ಆಫ್‌ಸೇಲ್

ವಿನೂತನ ಫ್ಯಾಶನ್‌ನಿಂದ ಮನಗೆದ್ದಿರುವ ಲೈಫ್‌ಸ್ಟೈಲ್ ಮತ್ತು ಹೋಮ್ ಸೆಂಟರ್ ತನ್ನ ಉತ್ಪನ್ನಗಳ ಮೇಲೆ ಶೇ 50 ಆಕರ್ಷಕ ರಿಯಾಯಿತಿ ಪ್ರಕಟಿಸಿದೆ.

ಶಾಪಿಂಗ್ ನಡೆಸುವವರು ಕಡೆಗಣಿಸಲಾಗದಂತಹ ಅತ್ಯಾಕರ್ಷಕ ದರ ಕಡಿತ ಇದು. ಇಲ್ಲಿ 350ಕ್ಕೂ ಅಧಿಕ ಬಗೆಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಲಭ್ಯವಿದ್ದು, ತಮಗಿಷ್ಟವಾದ ಬಟ್ಟೆ  ಖರೀದಿಸಿ ನಿಮ್ಮ ವಾರ್ಡ್‌ರೋಬ್ ತುಂಬಿಸಿಕೊಳ್ಳಬಹುದು.

ಬಟ್ಟೆಗಳ ಜತೆಗೆ ಕಾಸ್ಮೆಟಿಕ್ಸ್, ಪರಿಮಳಯುಕ್ತ ಕ್ಯಾಂಡಲ್‌ಗಳು, ಆಟದ ಸಾಮಗ್ರಿಗಳು, ಆಭರಣ, ವಾಚ್‌ಗಳು, ಸುಗಂಧ ದ್ರವ್ಯಗಳು, ಹೋಮ್ ಫರ್ನಿಶಿಂಗ್ ಮತ್ತು ಗೃಹಾಲಂಕಾರ ವಸ್ತುಗಳ ದೊಡ್ಡ ಸಂಗ್ರಹವಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುತ್ತವೆ. ಅಲ್ಲದೆ, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ, ಹೆಚ್ಚುವರಿಯಾಗಿ ಶೇ 5ರಿಯಾಯಿತಿ ಸಿಗಲಿದೆ.  ಕೋರಮಂಗಲದಲ್ಲಿರುವ ಓಯಸಿಸ್ ಸೆಂಟರ್, ಮಲ್ಲೇಶ್ವರಂ ನಲ್ಲಿರುವ ಮಂತ್ರಿ ಮಾಲ್, ಆಸ್ಟಿನ್ ಟೌನ್‌ನಲ್ಲಿರುವ ಆದರ್ಶ್ ಓಪಸ್‌ನ ಲೈಫ್‌ಸ್ಟೈಲ್ ಮತ್ತು ಹೋಮ್ ಸೆಂಟರ್‌ನಲ್ಲಿ ಈ ಕೊಡುಗೆ ಲಭ್ಯ.

ಪ್ರತಿಕ್ರಿಯಿಸಿ (+)