ಶನಿವಾರ, ಜೂನ್ 19, 2021
27 °C

ಲೊಕ್ಕನಹಳ್ಳಿ ರಸ್ತೆ: ಸಂಚಾರ ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನೂರು: ಮಹಾಲಿಂಗನ ಕಟ್ಟೆಯಿಂದ ಲೊಕ್ಕನಹಳ್ಳಿ ರಸ್ತೆ ಹದಗೆಟ್ಟಿದ್ದು, ಪ್ರಯಾಣ ದುಸ್ತರವಾಗಿದ್ದು, ಪ್ರಯಾಣಿಸಲು ಕಷ್ಟಕರವಾಗಿದ್ದರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕ್ಷೇತ್ರದ ಶಾಸಕರಿಗೆ  ಚಿಕ್ಕಮಾಲಾಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು. ಆದರೆ, ಯಾವುದೇ  ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ವಿಜಯ ಕುಮಾರ ತಿಳಿಸಿದ್ದಾರೆ. ಈ ರಸ್ತೆಯ ಮಾರ್ಗದಲ್ಲಿ ಚಿಕ್ಕ ಸೇತುವೆ ಇದ್ದು. ಕಾಮಗಾರಿ ಎರಡು ಸಲ ನಡೆದಿದ್ದರೂ ಸಹ ಇನ್ನೂ ಸಂಚಾರಕ್ಕೆ ಉಪಯೋಗಕಾರಿ ಆಗಿಲ್ಲ ಎಂದು ಒಡೆಯರ್ ಪಾಳ್ಯದ ನಿವಾಸಿಯಾದ ರಾಜಪ್ಪ ಮತ್ತು ಶಿರಿಗೋಡು ಗ್ರಾಮದ ಅಮಾವಾಸ್ಯ ಕುಟ್ಟಿಗೌಂಡರ್,  ಕಟ್ಟೆಗ್ರಾಮದ ನಿವಾಸಿ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆವಿದ್ಯುತ್‌ ವ್ಯತ್ಯಯ :  ತೊಂದರೆ

ಹನೂರು: ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರಿಗೆ ದಿನ ನಿತ್ಯದ ವ್ಯವಹಾರಗಳ ನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ. ಸುತ್ತಮುತ್ತಲ ಹಳ್ಳಿಗಳಿಂದ ಕುಶಲ ತರಬೇತಿಗಾಗಿ  ಪಟ್ಟಣಕ್ಕೆ ಆಗಮಿಸುವ ವಿದ್ಯಾರ್ಥಿಗಳು ವಿದ್ಯುತ್ ವ್ಯತ್ಯಯದಿಂದಾಗಿ ತರಬೇತಿ ಪಡೆಯಲು ಕಷ್ಟಕರವಾಗಿದೆ, ವಿದುತ್ಯ ಸರಬರಾಜಿನಲ್ಲಿ ಆಗಾಗ ಉಂಟಾಗುವ ವ್ಯತ್ಯಯದಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ  ಸಹ ತಲೆದೋರಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.