ಲೋಕಪಾಲಕ್ಕೆ ರಾಷ್ಟ್ರಪತಿ ಅಂಕಿತ

7

ಲೋಕಪಾಲಕ್ಕೆ ರಾಷ್ಟ್ರಪತಿ ಅಂಕಿತ

Published:
Updated:

ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹ ಉದ್ದೇಶದ, ಬಹುನಿರೀಕ್ಷಿತ ಲೋಕ­­­­­­­­­­­­­­­­­­­­­­­­­ಪಾಲ ಮಸೂದೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಬುಧವಾರ ಅಂಕಿತ ಹಾಕಿದ್ದಾರೆ.

ಪ್ರಧಾನ ಮಂತ್ರಿಗೆ ಕೆಲ ರಕ್ಷಣೆ ಒದಗಿಸುವ ಜತೆ ಅವರ ಕಚೇರಿ­ಯನ್ನೂ ಮಸೂದೆ ವ್ಯಾಪ್ತಿಗೆ ಒಳಪಡಿದೆ.2013ರ ಡಿ.17ರಂದು ಕೆಲ ತಿದ್ದುಪಡಿಗಳನ್ನು ಒಳಗೊಂಡ ಮಸೂ­­ದೆಗೆ ರಾಜ್ಯಸಭೆ ಸಮ್ಮತಿ ನೀಡಿದ್ದು ಮರು­ದಿನವೇ ಲೋಕ ಸಭೆಯೂ ಇದಕ್ಕೆ ಅಂಗೀ­ಕಾರ ನೀಡಿತ್ತು. ಮಂಗಳವಾರ­ವಷ್ಟೆ ಲೋಕ­­­ಸಭಾ ಸಚಿವಾಲಯ  ಈ ಮಸೂದೆ­ಯನ್ನು ರಾಷ್ಟ್ರಪತಿಗಳ ಅಂಕಿತ­ಕ್ಕಾಗಿ ಕಳುಹಿಸಿತ್ತು. ಮಸೂದೆ ಅನುಷ್ಠಾನಕ್ಕೆ ಬಂದ ಒಂದು ವರ್ಷದ ಅವಧಿಯೊಳಗೆ ಕೇಂದ್ರ­ ಹಾಗೂ ವಿವಿಧ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ರಚನೆ ಯಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry