ಲೋಕಪಾಲದಿಂದ ನೈತಿಕ ಸಮಾಜ ನಿರ್ಮಾಣ

7

ಲೋಕಪಾಲದಿಂದ ನೈತಿಕ ಸಮಾಜ ನಿರ್ಮಾಣ

Published:
Updated:

ಬೆಂಗಳೂರು: `ಹೆಚ್ಚುತ್ತಿರುವ ಭ್ರಷ್ಟಾಚಾರ ಸಮಸ್ಯೆಗಳಿಗೆ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವ ಬದಲು ಸಾರ್ವಕಾಲಿಕ ಧರ್ಮ ಆಧಾರಿತ ತತ್ವಗಳನ್ನು ಬಲಪಡಿಸಬೇಕು. ಆ ಮೂಲಕ ನೈತಿಕತೆಯ ಆಧಾರದ ಮೇಲೆ ಸಮಾಜವನ್ನು ರೂಪಿಸಬಹುದು~ ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾ ಜೋಯಿಸ್ ಅಭಿಪ್ರಾಯಪಟ್ಟರು.ಸಮರ್ಥ ಪ್ರಜ್ಞಾ ಪ್ರತಿಷ್ಠಾನವು ನಗರದ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್.ಎನ್. ನಾಗೇಂದ್ರ ಕುಮಾರ್ ಅವರ `ಚೈತನ್ಯದ ಹೊನ್ನುಡಿ~ ಇಂಗ್ಲಿಷ್ ಅವತರಣಿಕೆ `ಜೆಮ್ಸ ಆಫ್ ಟ್ರುಥ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. `ಧರ್ಮವೆಂಬುದು ಮನುಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ನೀತಿ ನಿಯಮ. ಮತ ಎಂಬುದು ಆರಾಧನೆಯ ಮಾದರಿ. ಧರ್ಮ ಮತ್ತು ಮತ ಎರಡೂ ಸಂಪೂರ್ಣ ಬೇರೆ ಬೇರೆಯಾಗಿದ್ದು, ಶಾಲೆಗಳಲ್ಲಿ ಧರ್ಮ ತತ್ವಗಳನ್ನು ಮಕ್ಕಳಿಗೆ ತಿಳಿಹೇಳುವ ಅಗತ್ಯವಿದೆ~ ಎಂದು ಎಂದು ಹೇಳಿದರು.`ಪೊಲೀಸ್ ಮತ್ತು  ಕಾನೂನು ವ್ಯವಸ್ಥೆಯು ಮನುಷ್ಯ ಮಾಡಿದ ತಪ್ಪಿಗೆ ಶಿಕ್ಷೆ ನೀಡುತ್ತದೆ. ಆದರೆ ತಪ್ಪುಗಳ ಸಂಭವಿಸಿದಂತೆ ಧರ್ಮದ ತತ್ವಗಳು ಜಾಗೃತಿ ವಹಿಸುತ್ತವೆ. ಈ ವಿಚಾರಗಳನ್ನು ಪುಸ್ತಕದಲ್ಲಿ ಲೇಖಕರು ಅಮೋಘವಾಗಿ ತಿಳಿಸಿದ್ದಾರೆ~ ಎಂದರು.ಹಿಮಾಲಯನ್ ಮಾಸ್ಟರ್ ಶ್ರೀ `ಎಂ~ ಮಾತನಾಡಿ, `ಧರ್ಮ ತತ್ವಗಳ ಮಹತ್ವವನ್ನು ಸಾರಿ ಹೇಳುವ ಈ ಪುಸ್ತಕವು ನಿಜಾರ್ಥದಲ್ಲಿ ಅಮೂಲ್ಯ ಗ್ರಂಥ. ಸರಳ ಜೀವನ ತತ್ವವನ್ನು ಜೀವನದಲ್ಲಿ ಅನುಸರಿಸುವ ಮೂಲಕ ಯಶಸ್ಸು ಕಂಡುಕೊಳ್ಳಬಹುದು~ ಎಂದು ಅಭಿಪ್ರಾಯಪಟ್ಟರು.ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಡಾ.ಅಜಯಕುಮಾರ್ ಸಿಂಹ, ನೀಲಂ ಅಚ್ಯುತ ರಾವ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry