ಮಂಗಳವಾರ, ಜೂನ್ 15, 2021
24 °C

ಲೋಕಪಾಲ್ ಮಸೂದೆ:ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಪ್ರಬಲವಾದ ಭ್ರಷ್ಟಾಚಾರ ನಿಗ್ರಹ ಲೋಕಪಾಲ್ ಮಸೂದೆ ರಚಿಸಲು ಕೇಂದ್ರ ಸರ್ಕಾರ ವಿಫಲಗೊಂಡಿದ್ದೇ ಆದರೆ ಅದು ಅಧಿಕಾರದಿಂದ ಕೆಳಗಿಳಿಯಬೇಕು ಎಂದಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು, ಬಲವಾದ ಲೋಕಪಾಲ ಮಸೂದೆ ಜಾರಿಗೆ ತಾವು ಇನ್ನೊಂದು  ~ಬೃಹತ್ ಪ್ರತಿಭಟನೆ~ಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.

ಇಂಡಿಯಾ ಟುಡೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ~ಮುಂಬರುವ 2014ರಲ್ಲಿ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಬಲವಾದ ಲೋಕಪಾಲ್ ಮಸೂದೆಗಾಗಿ ಚಳವಳಿ ಆರಂಭಿಸುವೆ, ಅದು ಆಗ ಸಾಧ್ಯವಾಗದಿದ್ದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಕೂಡುವೆ~ ಎಂದಿದ್ದಾರೆ.

~ಎ ದಿಲ್ ಮಾಂಗೆ ನೋ ಮೋರ್ ಕರಪ್ಷನ್~ ಹೆಸರಿನ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ~ಪ್ರಸ್ತುತ ಲೋಕಸಭೆಯಲ್ಲಿ ಲೋಕಪಾಲ್ ಮಸೂದೆ ಅಂಗೀಕಾರಗೊಂಡು ಕಾನೂನು ರಚನೆಯಾದರೆ, ಯುಪಿಎ ಸರ್ಕಾರದ ಸಂಪುಟದಲ್ಲಿನ ಅರ್ಧದಷ್ಟು ಸಚಿವರು ಜೈಲು ಕಂಬಿ ಎಣಿಸಬೇಕಾಗುತ್ತದೆ~ ಎಂದು ವ್ಯಂಗ್ಯವಾಡಿದ್ದಾರೆ.

~ಮಾಹಿತಿ ಹಕ್ಕು ಕಾನೂನಿನಿಂದ ಹಲವಾರು ಹಗರಣಗಳು ಬೆಳಕಿಗೆ ಬಂದವು. ಆದರೆ ಈ ಕಾನೂನಿಗೆ ಭ್ರಷ್ಟರನ್ನು ಜೈಲಿಗೆ ತಳ್ಳುವ ಅಧಿಕಾರವಿಲ್ಲ. ಬಲವಾದ ಭ್ರಷ್ಟಾಚಾರ ನಿಗ್ರಹದ ಕಾನೂನು ರಚನೆಯ ಮಹತ್ವವನ್ನು ಈ ಸಂಗತಿಗಳು ವಿಷದಪಡಿಸುತ್ತವೆ~ ಎಂದು ಅವರು ವಿವರಿಸಿದರು.

 


ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.