ಲೋಕಪಾಲ ಜಾರಿ ತನಕ ಬದುಕುತ್ತೇನೆ

7

ಲೋಕಪಾಲ ಜಾರಿ ತನಕ ಬದುಕುತ್ತೇನೆ

Published:
Updated:
ಲೋಕಪಾಲ ಜಾರಿ ತನಕ ಬದುಕುತ್ತೇನೆ

ನವದೆಹಲಿ (ಪಿಟಿಐ): ಉಪವಾಸ ಸತ್ಯಾಗ್ರಹದಲ್ಲಿರುವ ತಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗಾಂಧಿವಾದಿ ಅಣ್ಣಾ ಹಜಾರೆ, ನನ್ನ ಬಗ್ಗೆ ಚಿಂತಿಸದಿರಿ. ಲೋಕಪಾಲ ಮಸೂದೆ ಅಂಗೀಕಾರ ಆಗವವರೆಗೂ ನಾನು ಸಾಯುವುದಿಲ್ಲ ಎಂದಿದ್ದಾರೆ.ರಾಮಲೀಲಾ ಮೈದಾನದಲ್ಲಿ ಗುರುವಾರ ಮಧ್ಯಾಹ್ನಕ್ಕೂ ಸ್ವಲ್ಪ ಮುನ್ನ ವೇದಿಕೆ ಮೇಲೆ ಬಲಗೈಯನ್ನು ಮೇಲೆತ್ತಿ ಮೂರು ಬಾರಿ `ಭಾರತ್ ಮಾತಾಕಿ ಜೈ~ ಘೋಷಣೆ ಕೂಗಿ, ತಮ್ಮ ಅಪಾರ ಬೆಂಬಲಿಗರತ್ತ ಕೈಬೀಸಿ, ತಾವು ಆರೋಗ್ಯವಂತರಾಗಿರುವುದಾಗಿ ಸಂಕೇತ ಮಾಡಿದರು.ವೈದ್ಯರು ನನ್ನನ್ನು ಪರೀಕ್ಷಿಸಿದ್ದು, ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಉಪವಾಸ ಕುಳಿತ ಬಳಿಕ ದೇಹದಲ್ಲಿ 6.5 ಕೆಜಿ ತೂಕ ಕಡಿಮೆಯಗಿದೆ ಅಷ್ಟೇ. ದೇವರ ದಯೆ ಮತ್ತು ಸ್ವಶಕ್ತಿಯಿಂದ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಯಾವುದೇ ಕಷ್ಟ ಎದುರಾಗಿಲ್ಲ ಎಂದು ಅವರು ನುಡಿದರು.ವೈದ್ಯರ ಚಿಂತೆ: ಬೆಳಿಗ್ಗೆ ಹಜಾರೆಯವರನ್ನು ಪರೀಕ್ಷಿಸಿದ ವೈದ್ಯರು, ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಸ್ಥಿರತೆ ಇದ್ದು, ಕೆಟೋನ್ ಮಟ್ಟ ಕಡಿಮೆಯಾಗಿರುವುದಾಗಿ ಹೇಳಿದರು. ಅಣ್ಣಾ ಹತ್ತು ದಿನಗಳಿಂದ ಉಪವಾಸದಲ್ಲಿದ್ದು ಏನನ್ನೂ ತಿನ್ನದೆ, ನೀರು ಮಾತ್ರ ಕುಡಿಯುತ್ತಿದ್ದು, ಇದರಿಂದಾಗಿ ಅವರ ಆರೋಗ್ಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ವೈದ್ಯಕೀಯ ತಂಡದ ಮುಖ್ಯಸ್ಥ ಡಾ. ನರೇಶ್ ಟ್ರೆಹಾನ್ ಸುದ್ದಿಗಾರರಿಗೆ ತಿಳಿಸಿದರು.ಅಣ್ಣಾ ಚಾಲೀಸಾ

ಲಖನೌ (ಐಎಎನ್‌ಎಸ್):
ಗಾಜಿಯಾ ಬಾದ್‌ನ ಯುವ ಸಂಗೀತ  ನಿರ್ದೇಶಕ ರೊಬ್ಬರು `ಅಣ್ಣಾ ಚಾಲೀಸಾ~ ಸಂಯೋಜಿಸಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ವನ್ನು ಬೆಂಬಲಿಸಿದ್ದಾರೆ. ಸಂಕಲ್ಪ್ ಶ್ರೀವಾಸ್ತವ ಎಂಬ 21ರ ಯುವಕ ಅವಧ್ ಭಾಷೆಯಲ್ಲಿ 5 ನಿಮಿಷಗಳ ಅಣ್ಣಾ ಚಾಲೀಸಾ ಪ್ರಸ್ತುತ ಪಡಿಸಿದ್ದಾರೆ.ಹಲವು ಸಿನಿಮಾ ಹಾಗೂ ಜಾಹೀರಾತುಗಳಿಗೆ ಸಂಗೀತ ನಿರ್ದೇ ಶಿಸಿದ ಅನುಭವ ಇರುವ ಇವರು ಅಷ್ಟೋತ್ತರ ನಾಮಾವಳಿಯಂತೆ ನಲ್ವತ್ತು ಸಾಲುಗಳಲ್ಲಿ ಈ ಆರಾಧನಾ ಗೀತೆ ಬರೆದಿದ್ದಾರೆ.

ಅಣ್ಣಾಜಿ ನಮ್ಮೆಲ್ಲರಿಗಾಗಿ ಹೋರಾ ಡುತ್ತಿದ್ದಾರೆ. ಸಮಾಜದ ಎಲ್ಲ ವರ್ಗ ಹಾಗೂ ಪಂಗಡದವರ ಸಹಾಯಕ್ಕಾಗಿ ಚಳವಳಿ ಆರಂಭಿಸಿದ್ದಾರೆ.ಅವರನ್ನು ಬೆಂಬಲಿಸಲು ಈ ಚಾಲೀಸಾ ಹೊರ ತಂದಿದ್ದೇನೆ ಎಂದಿರುವ ಶ್ರೀವಾಸ್ತವ್‌ಗೆ ಇದನ್ನು ರಾಮಲೀಲಾದಲ್ಲಿ ಅಣ್ಣಾ ಹಜಾರೆ ಎದುರಿಗೆ ಪ್ರಸ್ತುತ ಪಡಿಸುವ ಇಂಗಿತವೂ ಇದೆ ಎಂದು ಹೇಳಿದ್ದಾರೆ.ಪ್ರಚಾರದಿಂದ ದೂರವಿದ್ದು ಉಪವಾಸ

ಶಿಮ್ಲಾ (ಐಎಎನ್‌ಎಸ್):
ಪ್ರಚಾರದಿಂದ ದೂರ ಉಳಿದ ಹಿಮಾಚಲ ಪ್ರದೇಶದ ಇಬ್ಬರು, ಅಣ್ಣಾ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ಕೈಗೊಂಡಿ ದ್ದಾರೆ.ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ರಾಗಿದ್ದ 41 ವಯಸ್ಸಿನ ದೇಶ್‌ರಾಜ್ ಶರ್ಮಾ ಮತ್ತು 67 ವಯಸ್ಸಿನ ನಿವೃತ್ತ ಸರ್ಕಾರಿ ನೌಕರ ಲಕ್ಷ್ಮೀಚಂದ್ ಠಾಕೂರ್ ಮಾಧ್ಯಮ ಪ್ರಚಾರದಿಂದ ದೂರ ಉಳಿದು ಉಪವಾಸ ನಡೆಸುತ್ತಿದ್ದಾರೆ.`ಅಣ್ಣಾ ಹಜಾರೆ ನಿಜವಾದ ಗಾಂಧೀವಾದಿ. ಸರ್ಕಾರ ಜನಲೋಕಪಾಲ ಮಸೂದೆ ಜಾರಿಗೊಳಿಸುವವರೆಗೆ ಅಣ್ಣಾ ಅವರನ್ನು ಬೆಂಬಲಿಸಿ ಚಳವಳಿ ನಡೆಸುತ್ತೇವೆ~ ಎಂದು ಶರ್ಮಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry