ಲೋಕಪಾಲ ಪ್ರತಿ ಹರಿದ ಸಂಸದನಿಗೆ ಶಿಕ್ಷೆಯಾಗಿಲ್ಲ

7

ಲೋಕಪಾಲ ಪ್ರತಿ ಹರಿದ ಸಂಸದನಿಗೆ ಶಿಕ್ಷೆಯಾಗಿಲ್ಲ

Published:
Updated:

ನವದೆಹಲಿ (ಐಎಎನ್‌ಎಸ್): 2011ರ ಡಿ. 29ರಂದು ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಚರ್ಚೆ ವೇಳೆ ಮಸೂದೆಯ ಕರಡು ಪ್ರತಿ ಹರಿದ ಆರ್‌ಜೆಡಿ ಸಂಸದ ರಾಜ್‌ನೀತಿ ಪ್ರಸಾದ್ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕಿದ್ದ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಕೋರಿದ ಮಾಹಿತಿಗೆ ರಾಜ್ಯಸಭೆ ಕಾರ್ಯದರ್ಶಿ ಉತ್ತರಿಸಿ, ಇದನ್ನು ಇನ್ನೂ ಸದನ ಸಮಿತಿ ಪರಿಶೀಲಿಸುತ್ತಿದೆ ಎಂದಿದ್ದಾರೆ. ಸಂಸದರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಲೋಕಪಾಲ ಬಗ್ಗೆ ನಾಗರಿಕ ಸಮಿತಿಯ ಕಿರಣ್ ಬೇಡಿ, ನಟ ಓಂ ಪುರಿ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದನ ಸಮಿತಿ ಪರಿಶೀಲಿಸುತ್ತಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry