ಲೋಕಪಾಲ ಮಸೂದೆ: ಜುಲೈ 3ರಂದು ಸರ್ವ ಪಕ್ಷ ಸಭೆ

ಗುರುವಾರ , ಜೂಲೈ 18, 2019
28 °C

ಲೋಕಪಾಲ ಮಸೂದೆ: ಜುಲೈ 3ರಂದು ಸರ್ವ ಪಕ್ಷ ಸಭೆ

Published:
Updated:

ನವದೆಹಲಿ (ಪಿಟಿಐ): ಉದ್ದೇಶಿತ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ನಾಗರಿಕ ಸಮಿತಿ ಮತ್ತು ಸರ್ಕಾರ ಮಂಡಿಸಿರುವ ಕರಡುಗಳ ಬಗ್ಗೆ ಚರ್ಚಿಸಲು ಜುಲೈ 3ರಂದು ಸರ್ವ ಪಕ್ಷ ಸಭೆ ನಡೆಯಲಿದೆ.ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರುವ ವಿಚಾರ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿ ಲೋಕಪಾಲ ಕರಡು ಮಸೂದೆ ಜಂಟಿ ಸಮಿತಿಯಲ್ಲಿ ವ್ಯಾಪಕ ಭಿನ್ನಾಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ  ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಸಂಬಂಧಿಸಿದಂತೆ  ಉಭಯ ಕಡೆಗಳು ಮುಂದಿಟ್ಟಿರುವ ಎರಡೂ ಕರಡುಗಳನ್ನು ಸರ್ಕಾರವು ರಾಜಕೀಯ ಪಕ್ಷಗಳ ಮುಂದಿಡಲಿದೆ.ಸರ್ವ ಪಕ್ಷಗಳ ಸಭೆಯನ್ನು ಜುಲೈ 3ರಂದು ಕರೆಯಲಾಗಿದೆ ಎಂದು ಸರ್ಕಾರಿ ಮೂಲಗಳು ಬುಧವಾರ ಇಲ್ಲಿ ತಿಳಿಸಿವೆ.9 ಸಭೆಗಳ ಬಳಿಕವೂ ಸರ್ಕಾರ ಮತ್ತು ನಾಗರಿಕ ಸಮಿತಿ ಸದಸ್ಯರಿಗೆ ಸಾಮಾನ್ಯ ಕರಡು ಮಸೂದೆ ರಚನೆ ವಿಚಾರದಲ್ಲಿ ಒಮ್ಮತ ಸಾಧ್ಯವಾಗಲಿಲ್ಲ. ಕೊನೆಯದಾದ 9ನೇ ಸಭೆ ಮಂಗಳವಾರ ನಡೆದು ಸಹಮತ ಸಾಧಿಸುವಲ್ಲಿ ವಿಫಲಗೊಂಡಿತ್ತು.ಎರಡೂ ಕರಡುಗಳನ್ನು ಕೇಂದ್ರ ಸಂಪುಟದಲ್ಲಿ ಚರ್ಚಿಸುವ ಮುನ್ನ ಎಲ್ಲ ರಾಜಕೀಯ ಪಕ್ಷಗಳಿಗೂ ವಿತರಿಸಿ ಅಭಿಪ್ರಾಯ ಪಡೆಯಲು ಸರ್ಕಾರ ತೀರ್ಮಾನಿಸಿದೆ.ಪ್ರಧಾನಿ, ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು  ಸಂಸತ್ ಸದಸ್ಯರ ಸದನದ ಒಳಗಿನ ನಡವಳಿಕೆಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಲು ಸರ್ಕಾರಿ ಕರಡು ಸ್ಪಷ್ಟವಾಗಿ ನಿರಾಕರಿಸಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾ ಹಜಾರೆ ಮತ್ತು ಬಳಗದ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಮತ್ತೆ ಸತ್ಯಾಗ್ರಹಕ್ಕೆ ಇಳಿಯುವ ನಿರ್ಧಾರವನ್ನು ಪುನರುಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry