ಶನಿವಾರ, ಏಪ್ರಿಲ್ 17, 2021
31 °C

ಲೋಕಪಾಲ ಸಮಿತಿ ಸದಸ್ಯರೆಲ್ಲಾ ಪ್ರಾಮಾಣಿಕರಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ‘ಲೋಕಪಾಲ ಮಸೂದೆ ಕರಡು ಸಮಿತಿಯ ಸದಸ್ಯರಾಗುವುದರಿಂದ ಅವರೆಲ್ಲಾ ಪ್ರಾಮಾಣಿಕರು ಎಂದೇನಲ್ಲ. ಸಮಿತಿಯಲ್ಲಿರುವ ಯಾರೇ ತಪ್ಪು ಮಾಡಿದರೂ ಅದು ತಪ್ಪೇ’ ಎಂದು ಯೋಗ ಗುರು ಬಾಬಾ ರಾಮದೇವ್ ಸೂಚ್ಯವಾಗಿ ಹೇಳಿದರು. ಲೋಕಪಾಲ ಮಸೂದೆ ಕರಡು ಸಮಿತಿ ಸದಸ್ಯ ಶಾಂತಿಭೂಷಣ ಅವರ ವಿರುದ್ಧ ಕೇಳಿಬಂದ ವಿವಾದಿತ ಸಿಡಿ ಪ್ರಕರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ರೀತಿ ಪ್ರತಿಕ್ರಿಯಿಸಿದರು.ಭಾರತ್ ಸ್ವಾಭಿಮಾನ್ ಟ್ರಸ್ಟ್ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯೋಗ ಮತ್ತು ಪ್ರಾಣಾಯಾಮ ಶಿಬಿರದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿಯಲ್ಲಿದ್ದಾಕ್ಷಣ ಪ್ರಾಮಾಣಿಕರೂ ಎಂದಲ್ಲ. ಯಾರೇ ತಪ್ಪು ಮಾಡಿದರು ಅದು ಅಕ್ಷಮ್ಯ. ಒಟ್ಟಾರೆ ನಮ್ಮ ಗುರಿ ಸಮರ್ಥ ಲೋಕಪಾಲ ಮಸೂದೆ ಸಿದ್ಧಗೊಳ್ಳಬೇಕು ಎನ್ನುವುದಷ್ಟೇ. ಈ ಬಗ್ಗೆ ‘ನೋ ಕಾಮೆಂಟ್ಸ್’ ಎಂದು ಮಾತು ಮುಗಿಸಿದರು.ಭ್ರಷ್ಟಾಚಾರ ವಿರುದ್ಧ ಪ್ರಥಮ ಹೆಜ್ಜೆ ಇಟ್ಟಿದ್ದು, ಯುದ್ಧ ಈಗ ಆರಂಭವಾಗಿದೆ; ವಿಜಯ ಸಾಧಿಸಿಲ್ಲ. ಇನ್ನೂ ಅಕ್ರಮ ಗಣಿಗಾರಿಕೆ, ವಿದೇಶಿ ಬ್ಯಾಂಕ್‌ನಲ್ಲಿರುವ ಕಪ್ಪುಹಣ ಸೇರಿದಂತೆ ಎಲ್ಲ ರೀತಿಯ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕಿದೆ ಎಂದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಯಾರೇ ಮುಂದೆ ಬಂದು ಕೈಜೋಡಿಸಿದರೂ ಅವರಿಗೆ ಮುಕ್ತ ಸ್ವಾಗತವಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.