ಶುಕ್ರವಾರ, ಜೂನ್ 18, 2021
24 °C

ಲೋಕಸಭಾ ಚುನಾವಣೆಗೆ ಸಿದ್ಧತೆ–ಯೋಗೀಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಲೋಕಸಭಾ ಚುನಾವಣೆಗೆ ಸಂಬಂ­ಧಿಸಿದಂತೆ ತಾಲ್ಲೂಕು ವ್ಯಾಪ್ತಿಯ ಎರಡು ವಿಧಾನ­ಸಭಾ ಕ್ಷೇತ್ರಗಳಾದ ಕುಂದಾಪುರ ಹಾಗೂ ಬೈಂದೂರಿ­ನಲ್ಲಿ ಒಟ್ಟು 3,85,950ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಕುಂದಾಪುರ ಕಂದಾಯ ಉಪವಿಭಾಗಾಧಿಕಾರಿ ಯೋಗೀಶ್ವರ ಹೇಳಿದರು.ಲೋಕಸಭಾ ಚುನಾವಣೆಯ ಪೂರ್ವ ಸಿದ್ದತಾ ಕಾರ್ಯಗಳ ಕುರಿತು ಮಂಗಳವಾರ ಉಪ­ವಿಭಾ­ಗಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಪತ್ರಿಕಾ­ಗೋಷ್ಠಿಯಲ್ಲಿ ಅವರು ಮಾತನಾಡಿದರು.ಚಿಕ್ಕಮಗಳೂರು–ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಯಡಿಯಲ್ಲಿ ಬರುವ ಕುಂದಾಪುರ ವಿಧಾನ­ಸಭಾ ಕ್ಷೇತ್ರದಲ್ಲಿ 87,868 ಪುರುಷರು ಹಾಗೂ  96,907 ಮಹಿಳೆಯರು ಸೇರಿ  ಒಟ್ಟು 18,4781 ಮತದಾರರಿದ್ದು, ಅವರು 215 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ  ಬೈಂದೂರು ವಿಧಾನ­ಸಭಾ ಕ್ಷೇತ್ರದಲ್ಲಿ 95,260 ಪುರುಷರು ಹಾಗೂ 1,05,897 ಮಹಿಳೆಯರು ಸೇರಿ ಒಟ್ಟು 2,01,169 ಮತದಾರರಿದ್ದು, 240 ಮತಗಟ್ಟೆಗಳಲ್ಲಿ  ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಅವರು ವಿವರ ನೀಡಿದರು.ಕುಂದಾಪುರ ಕ್ಷೇತ್ರದಲ್ಲಿ 35 ಅತಿಸೂಕ್ಷ್ಮ , 79 ಸೂಕ್ಷ್ಮ , 101 ಸಾಮಾನ್ಯ ಹಾಗೂ  8 ನಕ್ಸಲ್ ಪ್ರದೇಶ ಮತಗಟ್ಟೆಗಳಿದೆ. ಬೈಂದೂರು ಕ್ಷೇತ್ರದಲ್ಲಿ 29 ಅತಿಸೂಕ್ಷ, 88 ಸೂಕ್ಷ್ಮ, 105 ಸಾಮಾನ್ಯ ಹಾಗೂ 18 ನಕ್ಸಲ್ ಪ್ರದೇಶದ ಮತಗಟ್ಟೆಗಳಿವೆ. ಚುನಾ­ವಣಾ ಕಾರ್ಯದ ಪರಿಶೀಲನೆಗಾಗಿ ಕುಂದಾಪುರ ಕ್ಷೇತ್ರದಲ್ಲಿ 17 ಸೆಕ್ಟರ್‌ ಅಧಿಕಾರಿಗಳ ತಂಡ, 3 ಮಾದರಿ ನೀತಿ ಸಂಹಿತೆಯ ತಂಡ, 3 ಸಂಚಾರಿ ಪಡೆ, 3 ವೀಡಿಯೋ ಛಾಯಾಗ್ರಾಹಕ ತಂಡ, 1 ವೀಡಿಯೋ ವೀಕ್ಷಣ ತಂಡ, 1 ಖರ್ಚು ವೆಚ್ಚ ಮೇಲ್ವಿಚಾರಣೆ ತಂಡ ರಚಿಸಲಾಗಿದ್ದು, ಮೂರು ಗಡಿ ಭಾಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ರಚಿಸಲಾಗಿದೆ.ಬೈಂದೂರು ಕ್ಷೇತ್ರದಲ್ಲಿ 19 ಸೆಕ್ಟರ್ ಅಧಿಕಾರಿಗಳ ತಂಡ, 3 ಮಾದರಿ ನೀತಿ ಸಂಹಿತೆಯ ತಂಡ,3 ಸಂಚಾರಿ ಪಡೆ, 3 ವೀಡಿಯೋ ಛಾಯಾಗ್ರಾಹಕ ತಂಡ, 1 ವೀಡಿಯೋ ವೀಕ್ಷಣ ತಂಡ, 1 ಖರ್ಚು ವೆಚ್ಚ ಮೇಲ್ವಿಚಾರಣೆ ತಂಡ ರಚಿಸಲಾಗಿದ್ದು, ಮೂರು ಗಡಿ ಭಾಗಗಳಲ್ಲಿ ಚಕ್‌ ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ಅವರು ವಿವರ ನೀಡಿದರು.ಕುಂದಾಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸ­ಲಾಗಿದ್ದು, ಯಾವುದೇ ಮತದಾರರು ಮತದಾನದ ಬಗ್ಗೆ ಮಾಹಿತಿಯನ್ನು ದೂರವಾಣಿ ಸಂಖ್ಯೆ 230357(08254) ಹಾಗೂ  ಪ್ರ.ದ.ಸಹಾಯಕ ರವಿ ಅವರ ಮೊಬೈಲ್‌ ದೂರವಾಣಿ ಸಂಖ್ಯೆ  9535289584 ಗೆ ಕರೆ ಮಾಢಿ ಮಾಹಿತಿ ಪಡೆದುಕೊಳ್ಳಬಹುದು.ಬೈಂದೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸಹಾಯ­ವಾಣಿಯನ್ನು ಸ್ಥಾಪಿಸಲಾಗಿದ್ದು, ಮತದಾರರು ದೂರವಾಣಿ ಸಂಖ್ಯೆ 251657(0824) ಹಾಗೂ ಬೈಂದೂರು ಶಿರಸ್ತೆದಾರರ ಮೊಬೈಲ್‌ ಸಂಖ್ಯೆ 9448770455 ಗೆ ಸಂಪರ್ಕಿಸಲು ಕೋರಲಾಗಿದೆ ಎಂದರು.ಚುನಾವಣಾಧಿಕಾರಿ, ಪೊಲೀಸ್‌, ಪುರಸಭೆ ಅಧಿಕಾರಿಗಳ ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ­ಯನ್ನು ಮಾಡಲಾಗಿದ್ದು, ಈ ಕುರಿತು ಮಾಹಿತಿ ಅಪೇಕ್ಷಿಸುವವರು ಗ್ರಾಮ ಕರಣಿಕ ರವಿಶಂಕರ ಆರ್‌.ಎಸ್‌ ( 9482658961)ರವರನ್ನು ಸಂಪರ್ಕಿಸುವಂತೆ ಉಪವಿಭಾಗಾಧಿಕಾರಿ ತಿಳಿಸಿದರು. ಬೈಂದೂರು ವಿಶೇಷ ತಹಶೀಲ್ದಾರ್‌ ಪ್ರಭುಲಿಂಗ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.