ಲೋಕಸಭೆಯ ಮೊದಲ ಕಲಾಪ

7

ಲೋಕಸಭೆಯ ಮೊದಲ ಕಲಾಪ

Published:
Updated:

ನವದೆಹಲಿ (ಪಿಟಿಐ): ಲೋಕಸಭೆಯ ಪ್ರಥಮ ಕಲಾಪ ಆರಂಭವಾಗಿದ್ದು 1952ರ ಮೇ 13ರಂದು. ಈ ಕಲಾಪ ಆರಂಭವಾಗಿದ್ದು ಎರಡು ನಿಮಿಷಗಳ ಮೌನಾಚರಣೆ ಮೂಲಕ. ಸ್ಪೀಕರ್ ಆಗಿ ಜಿ.ವಿ. ಮಾವ್ಳಂಕರ್ ಅವರನ್ನು ನೇಮಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು.60 ವರ್ಷಗಳ ಹಿಂದೆ ಸಂಸತ್ ಕಲಾಪ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡಿತ್ತು ಎಂಬುದನ್ನು ಸಂಸತ್ತಿನ ದಾಖಲೆಗಳು ಹೇಳುತ್ತವೆ. ಪೂರ್ವ ಅಲಹಾಬಾದ್ ಮತ್ತು ಪಶ್ಚಿಮ ಜೌನ್‌ಪುರ  ಪ್ರತಿನಿಧಿಸಿದ್ದ ಜವಾಹರಲಾಲ್ ನೆಹರು ಲೋಕಸಭೆಯ ಮೊದಲ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೇ 15ರಂದು ಆಹಾರ ಸಬ್ಸಿಡಿ ವಿಷಯದ ಕುರಿತ ಚರ್ಚೆ ವೇಳೆ ಕಲಾಪವನ್ನು ಮುಂದೂಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry