ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

7

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

Published:
Updated:

ಗದಗ: ಲೋಕಾಯುಕ್ತ  ಅಧಿಕಾರಿಗಳು ಜಿಲ್ಲೆಯ ತಾಲ್ಲೂಕುಗಳಿಗೆ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ, ದೂರು, ಅರ್ಜಿ ಮತ್ತು ಅಹವಾಲು ಸ್ವೀಕರಿಸಲಿದ್ದಾರೆ.ಜಿ.ಆರ್.ಪಾಟೀಲ ಮತ್ತು ಎಂ.ಐ. ನಡುವಿನಮನಿ  ಅವರು ಅ. 11  ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2  ಗಂಟೆಯವರೆಗೆ  ಶಿರಹಟ್ಟಿಯ ಬೇಂದ್ರೆ ಭವನದಲ್ಲಿ , ಜಿ.ಆರ್. ಪಾಟೀಲ್  ಮತ್ತು ಸಂಗನಗೌಡ  ಅವರು 16ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನರಗುಂದ ತಾಲ್ಲೂಕು  ಪಂಚಾಯತ್ ಸಭಾಭವನದಲ್ಲಿ ಜಿ.ಆರ್. ಪಾಟೀಲ  ಮತ್ತು   ಶ್ರೀ ಸಂಗನಗೌಡ ಅವರು 17 ರಂದು  11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ರೋಣ ತಾಲ್ಲೂಕು ಪಂಚಾಯತಿ ಸಭಾ  ಭವನದಲ್ಲಿ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry