ಗುರುವಾರ , ಮೇ 13, 2021
22 °C

ಲೋಕಾಯುಕ್ತರಿಂದ ಇನ್ನಷ್ಟು ಕಾಲಾವಕಾಶ ಕೋರಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಾಸಕ ನೆಹರೂ ಓಲೇಕಾರ ಅವರ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಏ.19ಕ್ಕೆ ತನಿಖಾ ವರದಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದ್ದು, ಆದರೆ, ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸದೇ ಇನ್ನಷ್ಟು ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.ಪ್ರಕರಣ ಕುರಿತು ದಾವಣಗೆರೆ ಲೋಕಾಯುಕ್ತ ಎಸ್‌ಪಿ ಕಮ್ಮಾರ ಅವರು ತನಿಖೆ ನಡೆಸುತ್ತಿದ್ದಾರೆ. ಅದು ಪೂರ್ಣಗೊಂಡ ನಂತರ ನ್ಯಾಯಾ ಲಯಕ್ಕೆ ವರದಿ ಸಲ್ಲಿಸಲು ಲೋಕಾ ಯುಕ್ತರು ಹಾಗೂ ಉಪ ಲೋಕಾ ಯುಕ್ತರು ಅನುಮತಿ ಅವಶ್ಯವಾಗಿದೆ. ಆದರೆ, ರಾಜ್ಯದಲ್ಲಿ ಲೋಕಾಯುಕ್ತರಾ ಗಲಿ, ಉಪ ಲೋಕಾಯುಕ್ತರಾಗಲಿ ಇಲ್ಲದ ಕಾರಣ ವರದಿ ಸಲ್ಲಿಸಲು ಸಾಧ್ಯ ವಾಗುತ್ತಿಲ್ಲ ಎಂದು ಹೇಳಲಾಗುತ್ತದೆ.ಶಾಸಕ ನೆಹರೂ ಓಲೇಕಾರ, ಪುತ್ರ ಮಂಜುನಾಥ ಓಲೇಕಾರ ಹಾಗೂ ಪುತ್ರಿ ಲಕ್ಷ್ಮೀ ಓಲೇಕಾರ ಅವರು ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿ ದಂತೆ ಹಾವೇರಿ ನಗರಾಭಿವೃದ್ಧಿ ಪ್ರಾಧಿ ಕಾರದಿಂದ ಅಕ್ರಮ ನಿವೇಶನ ಪಡೆ ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಈರಪ್ಪ ಲಮಾಣಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ. ರಾಮಕೃಷ್ಣಯ್ಯ ಫೆಬ್ರುವರಿ 18 ಕ್ಕೆ ತನಿಖಾ ವರದಿ ಸಲ್ಲಿಸುವಂತೆ ಲೋಕಾ ಯುಕ್ತ ಪೊಲೀಸರಿಗೆ ಗಡುವು ನೀಡಿ ದ್ದರು. ಆದರೆ, ಫೆ.18 ರಂದು ಮತ್ತೆ ಎರಡು ತಿಂಗಳು ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ಮನವಿ ಯನ್ನು ಮನ್ನಿಸಿದ ನ್ಯಾಯ ಮೂರ್ತಿ ಕೆ.ಸಿ.ರಾಮಕೃಷ್ಣಯ್ಯ ಏ. 19 ಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಇಲ್ಲದ ಕಾರಣ ಇಲಾಖೆಯಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವರದಿ ಸಲ್ಲಿಕೆಗೆ ಇನ್ನಷ್ಟು ಕಾಲ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಹೇಳ ಲಾಗುತ್ತಿದೆ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಶಾಸಕರ ಪುತ್ರ ಮಂಜುನಾಥ ಓಲೇಕಾರ ಹಾಗೂ ಕಾರ್ಯದರ್ಶಿಯಾಗಿರುವ ಪುತ್ರಿ ಲಕ್ಷ್ಮೀ ಓಲೇಕಾರ ಹಾವೇರಿ ನಗರಾ ಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ಬಾಹಿರವಾಗಿ ನಿವೇಶನ ಪಡೆಯಲು ಶಾಸಕ ನೆಹರೂ ಓಲೇಕಾರ ಅವರು ಪ್ರಭಾವ ಬೀರಿ ವಂಚಿಸಿದ್ದಾರೆ ಹಾಗೂ ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭೆ ಹಿಂದಿನ ಆಯುಕ್ತ ವೀರಾಪುರ ಸಹಕರಿಸಿದ್ದಾರೆ ಎಂದು ಆರೋಪ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.