ಮಂಗಳವಾರ, ನವೆಂಬರ್ 12, 2019
27 °C

ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಭೂಮಾಪಕ

Published:
Updated:

ಬೀದರ್: ಭೂಮಿ ಸರ್ವೆ ಮಾಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ಬೀದರ ತಹಶೀಲ್ದಾರ್ ಕಚೇರಿಯ ಪರವಾನಿಗೆ ಭೂಮಾಪಕರೊಬ್ಬರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಜಗದೀಶ್ ಹಲಗೇಗೌಡ  ಸಿಕ್ಕಿಬಿದ್ದಿರುವ ಭೂಮಾಪಕ. ಈತನ ವಿರುದ್ಧ ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸಂತೋಷ್ ಶಂಕರ ದೂರು ನೀಡಿದ್ದರು. `ಜಮೀನು ಸರ್ವೆಗೆ ಈಗಾಗಲೇ ರೂ. 4 ಸಾವಿರ ಪಡೆದಿದ್ದರು. ಮತ್ತೆ ರೂ. 2 ಸಾವಿರ ನೀಡಲು ಬೇಡಿಕೆ ಇಟ್ಟಿದ್ದರು' ಎಂದು ದೂರಿನಲ್ಲಿ ತಿಳಿಸಿದ್ದರು.ಶುಕ್ರವಾರ ಬಸವೇಶ್ವರ ವೃತ್ತದ ಬಳಿ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ಜಗದೀಶ್ ಹಲಗೆಗೌಡ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಭಾಸು ಚವ್ಹಾಣ್, ಆರ್.ಎಸ್.ಜಾಗಿರದಾರ್, ಸಹಾಯಕ ತನಿಖಾಧಿಕಾರಿ ಶ್ರೀಕಾಂತ ಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)