ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಧರಣಿ

7

ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಧರಣಿ

Published:
Updated:

ಚಾಮರಾಜನಗರ: ಸರ್ಕಾರ ಶೀಘ್ರವೇ ಲೋಕಾಯುಕ್ತರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ನಿಜಧ್ವನಿ ಸೇನಾ ಸಮಿತಿ ಹಾಗೂ ಕನ್ನಡ ರಕ್ಷಣಾ ಸಮಿತಿ ವತಿಯಿಂದ ಧರಣಿ ಹಾಗೂ ಉಪವಾಸ ಸತ್ಯಾಗ್ರಹವನ್ನು ಭಾನುವಾರ ನಡೆಸಿದರು.ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಲೋಕಾಯುಕ್ತರನ್ನು ನೇಮಿಸಿದರೆ ಸರ್ಕಾರದ ಹಾಗೂ ಅಧಿಕಾರಿಗಳ ಭೂಹಗರಣ, ಭ್ರಷ್ಟಾಚಾರಗಳು ಬಯ ಲಾಗಿ ಜೈಲಿಗೆ ಹೋಗಬೇಕಾಗಬಹುದು ಎಂದು ಹೆದರಿ ಲೋಕಾಯುಕ್ತರನ್ನು ನೇಮಿಸದೆ ಸಮಯ ದೂಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.  ಈ ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಹರವೆ ಗುರುಸ್ವಾಮಿ, ಶಂಕರ್, ಚಂದ್ರ ಕುಮಾರ್, ಅಂಬರೀಷ್, ನಾರಾಯಣ ಸ್ವಾಮಿ, ಕೆ.ಆರ್.ನಾರಾಯಣ, ಎನ್. ಕುಮಾರ್, ಮಹದೇವು, ಸಣ್ಣ ಮಹದೇವು, ಕೆಂಚಪ್ಪ, ನಾಗೇಂದ್ರಗೌಡ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry