ಲೋಕಾಯುಕ್ತರ ಪತ್ರ ಗಂಭೀರ ಪರಿಗಣನೆ

7

ಲೋಕಾಯುಕ್ತರ ಪತ್ರ ಗಂಭೀರ ಪರಿಗಣನೆ

Published:
Updated:

ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದು­ರಿ­ಸುತ್ತಿರುವ ಅಧಿಕಾರಿಗಳ ವಿರು­ದ್ಧ  ಆರೋಪಪಟ್ಟಿ ಸಲ್ಲಿಸಲು ಅನು­ಮತಿ ಕೋರಿ  ಲೋಕಾಯುಕ್ತರಿಂದ ಬರುವ ಪತ್ರ­ಗ­ಳನ್ನು ಗಂಭೀರವಾಗಿ ಪರಿ­ಗಣಿಸಲು ಸರ್ಕಾರ ತೀರ್ಮಾನಿಸಿದೆ.ಶುಕ್ರವಾರ ನಡೆದ ಸಚಿವ ಸಂಪುಟ ಸಭೆ­ಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.‘ಮುಖ್ಯಮಂತ್ರಿ, ಮುಖ್ಯ ಕಾರ್ಯ­ದರ್ಶಿ ಪೈಕಿ ಲೋಕಾಯುಕ್ತರು ಯಾರಿಗೆ ಪತ್ರ ಬರೆದಿದ್ದಾರೆ ಎಂಬುದು  ನಿರ್ದಿಷ್ಟ­ವಾಗಿ ಗೊತ್ತಾಗಿಲ್ಲ. ನನಗೆ ಯಾವುದೇ ಪತ್ರ ಬಂದಿಲ್ಲ’ ಎಂದು ಮುಖ್ಯಕಾರ್ಯ­ದರ್ಶಿ ಕೌಶಿಕ್‌ ಮುಖರ್ಜಿ ಹೇಳಿದರು ಎನ್ನಲಾಗಿದೆ.ಆಗ ಮಧ್ಯಪ್ರವೇಶಿಸಿದ ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಲೋಕಾ­ಯುಕ್ತ ಪ್ರಕರ­ಣ­­ಗಳ ಬಗ್ಗೆ ವಿವರವಾದ ಮಾಹಿ­ತಿ ಕಲೆ ಹಾಕಿ 2–3 ದಿನಗಳಲ್ಲಿ ನೀಡು­ವಂತೆ ಮುಖ್ಯ­ಕಾರ್ಯದರ್ಶಿ­ಗಳಿಗೆ ಸೂಚಿಸಿ­ದರು ಎನ್ನಲಾಗಿದೆ.ಅಧಿಕಾರಿಗಳ ವಿರುದ್ಧ ಕ್ರಮಕೈಗೊ­ಳ್ಳಲು ಅನುಮತಿ ನೀಡುವಂತೆ ಕೋರಿ ಸರ್ಕಾ­ರಕ್ಕೆ ಸಲ್ಲಿಸಿರುವ 94 ಪ್ರಕರಣ­ಗಳು ಇನ್ನೂ ಬಾಕಿ ಇವೆ. ಈ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್‌ ಅವರು ಗುರುವಾರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry