ಲೋಕಾಯುಕ್ತರ ಬಲೆಗೆ ಪಿಡಿಒ

ಬುಧವಾರ, ಜೂಲೈ 17, 2019
27 °C

ಲೋಕಾಯುಕ್ತರ ಬಲೆಗೆ ಪಿಡಿಒ

Published:
Updated:

ಧಾರವಾಡ: ಆಶ್ರಯ ಯೋಜನೆಯ ಫಲಾನುಭವಿಗೆ ಚೆಕ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಘಟನೆ ಗುರುವಾರ ನಡೆದಿದೆ.ಕಲಘಟಗಿ ತಾಲ್ಲೂಕಿನ ಜಿ.ಬಸವನಕೊಪ್ಪ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ವೈ.ಎಚ್.ಹೊಟ್ಟಿಗೌಡರ ಲೋಕಾಯುಕ್ತರ ಬಲೆಗೆ ಬಿದ್ದವರು. ಕಳಸನಕೊಪ್ಪ ಗ್ರಾಮದ ಜಮನಿಂಗಪ್ಪ ಮಡಿವಾಳಪ್ಪ ಮನಗುಂಡಿ  ಅವರ ತಾಯಿಯ ಹೆಸರಿನಲ್ಲಿ ಅಂಬೇಡ್ಕರ ಆಶ್ರಯ ಯೋಜನೆಯಡಿಯಲ್ಲಿ ಮನೆ ಕಟ್ಟಿಸಲು ಒಟ್ಟು 40000 ರೂ. ಮಂಜೂರಾಗಿತ್ತು. ಇದರಲ್ಲಿ ಮೂರು ಕಂತುಗಳಲ್ಲಿ 30000 ರೂ. ಪಾವತಿಯಾಗಿದೆ. ಕೊನೆಯ ಕಂತಿನ 10000 ರೂ. ಚೆಕ್ ನೀಡಲು 1500 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿ ಹೊಟ್ಟಿಗೌಡರ ಅವರನ್ನು ಬಂಧಿಸಿದ್ದಾರೆ.ಪಿಐ ಎ.ಬಿ.ಹರಪನಹಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಎಸ್‌ಪಿ ಎಸ್. ಎಸ್. ಅಲಮೇಲಕರ ಮಾರ್ಗದರ್ಶನದಲ್ಲಿ ಪಿಐ ರಾಘವೇಂದ್ರ ಹವಾಲ್ದಾರ, ಸಿಬ್ಬಂದಿ ಬಸವರಾಜ ಕೆರಕನವರ, ಜೆ.ಜಿ.ಕಟ್ಟಿ, ಸುರೇಶ ಮಾಮನ್ನಿ, ಎಸ್. ಸಿ.ಲೋಖಂಡೆ, ಎಂ.ಸಿ.ಕಂಗೂರಿ, ಪಿ.ಎಂ.ಅಂಗಡಿ, ಪಿ.ಜಿ. ಕಾಳೆ, ಆರ್.ಆರ್. ನಾಗರಡ್ಡಿ, ಎಸ್.ಎಚ್.ಹುಲಗೇರಿ ದಾಳಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry