ಲೋಕಾಯುಕ್ತರ ಬಲೆಗೆ ಪೊಲೀಸ್ ಕಾನ್‌ಸ್ಟೇಬಲ್

ಮಂಗಳವಾರ, ಜೂಲೈ 23, 2019
25 °C

ಲೋಕಾಯುಕ್ತರ ಬಲೆಗೆ ಪೊಲೀಸ್ ಕಾನ್‌ಸ್ಟೇಬಲ್

Published:
Updated:

ಕೃಷ್ಣರಾಜಪೇಟೆ: ಲಂಚ ಸ್ವೀಕರಿಸುತ್ತಿದ್ದ ಮುಖ್ಯ ಪೋಲೀಸ್ ಪೇದೆಯೊಬ್ಬರು ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.ಗ್ರಾಮಾಂತರ ಪೋಲೀಸ್ ಠಾಣೆಯ ಮುಖ್ಯಪೇದೆ ರಾಜಣ್ಣ ಎಂಬುವವರೇ ಲೋಕಾಯುಕ್ತರಿಗೆ ಸಿಕ್ಕಿಬಿದ್ದವರಾಗಿದ್ದಾರೆ. ಪಟ್ಟಣದ ರವಿ ಎಂಬುವವರ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವನ್ನು ಬಗೆಹರಿಸಲು ರಾಜಣ್ಣ 2 ಸಾವಿರ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿದ್ದು, ಮಂಗಳವಾರ ಸಂಜೆ ರವಿ, ರಾಜಣ್ಣನಿಗೆ ಹಣ ನೀಡುವ ವೇಳೆ ಲೋಕಾಯುಕ್ತಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್ ನೇತೃತ್ವದ ತಂಡ ಹಣದ ಸಮೇತ ಹಿಡಿದಿದೆ.ರಾಜಣ್ಣ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೃದ್ಧನ ಶವ ಪತ್ತೆ

ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಸತ್ತಿರುವ ವೃದ್ದನೊಬ್ಬನ ಶವವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.ಶವದ ಗುರುತು ಪತ್ತೆ: ಮೃತ ವ್ಯಕ್ತಿಯನ್ನು ತಾಲ್ಲೂಕಿನ ದೊದ್ದನಕಟ್ಟೆ ಗ್ರಾಮದ ಬೋರೇಗೌಡ ಎಂದು ಗುರುತಿಸಲಾಗಿದೆ. ಈತ ಕೆಲವು ದಿನಗಳಿಂದ ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮತ್ತು ರಾತ್ರಿವೇಳೆ ಬಸ್‌ನಿಲ್ದಾಣದಲ್ಲಿ ಅಥವಾ ಅಂಗಡಿಗಳ ಮುಂದೆ ಮಲಗುತ್ತಿದ್ದ ಎನ್ನಲಾಗಿದೆ. ಶವವನ್ನು ಪೋಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry