ಮಂಗಳವಾರ, ಜನವರಿ 21, 2020
20 °C

ಲೋಕಾಯುಕ್ತ ದಾಳಿ: ದಾಖಲೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ ದಾಳಿ: ದಾಖಲೆ ವಶ

ಕೊಪ್ಪಳ: ನಗರ ಸೇರಿದಂತೆ ಜಿಲ್ಲೆಯ ಮೂರು ಕಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಬಸವರಾಜ ಬಂಡಿವಡ್ಡರ್‌ಗೆ ಸೇರಿದ ಆಸ್ತಿ–ಆದಾಯ ಕುರಿತಂತೆ ದಾಖಲೆ, ವಿವರಗಳನ್ನು ಸಂಗ್ರಹಿಸಿದ್ದಾರೆ.ರಾಯಚೂರು ಲೋಕಾಯುಕ್ತ ಎಸ್‌ಪಿ ಎ.ಎಚ್‌.ಚಿಪ್ಪಾರ ನೇತೃತ್ವದ ತಂಡ ಇಲ್ಲಿನ ಮರಿಶಾಂತವೀರನಗರದಲ್ಲಿರುವ ಬಸವರಾಜ ಅವರ ಮನೆ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತು.ಅಲ್ಲದೇ, ಬಸವರಾಜ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಯಲಬುರ್ಗಾದಲ್ಲಿರುವ ಕಚೇರಿ ಹಾಗೂ ಕಿನ್ನಾಳ ಬಳಿಯ ದೇವಲಾಪುರದಲ್ಲಿರುವ ಫಾರ್ಮ್‌ ಹೌಸ್‌ ಮೇಲೆ ಸಹ ದಾಳಿ ನಡೆಸಿರುವ ಅಧಿಕಾರಿಗಳು, ಮಾಹಿತಿಯನ್ನು ಸಂಗ್ರಹಿದರು.ಡಿ.ವೈ.ಎಸ್.ಪಿ ಯವರಾದ ಚಿಕ್ಕರೆಡ್ಡಿ, ಎಸ್.ಬಿ.ಪಾಟೀಲ, ಸಿಬ್ಬಂದಿ ವೆಂಕಟೇಶ ಮೊರನಾಳ, ರಾಮಣ್ಣ ಬನ್ನಿಗೋಳ, ದಾವಲಸಾಬ, ಅಜಮ್, ರಾಘವೇಂದ್ರ ಜೋಶಿ ಮತ್ತಿತರರು ದಾಳಿಯಲ್ಗಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)