ಲೋಕಾಯುಕ್ತ ನೇಮಕಕ್ಕೆ: 2 ದಿನದಲ್ಲಿ ಚಾಲನೆ: ಸಿಎಂ

7

ಲೋಕಾಯುಕ್ತ ನೇಮಕಕ್ಕೆ: 2 ದಿನದಲ್ಲಿ ಚಾಲನೆ: ಸಿಎಂ

Published:
Updated:

ಬೀರೂರು(ಚಿಕ್ಕಮಗಳೂರು): ಲೋಕಾಯುಕ್ತರ ಹುದ್ದೆಗೆ ಹೊಸ ಹೆಸರು ಸೂಚಿಸಿ, ಇನ್ನೆರಡು ದಿನದಲ್ಲಿ  ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಂಗಳವಾರ ಇಲ್ಲಿ ಹೇಳಿದರು.ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರೋಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಾತನಾಡಿದರು.ಪಕ್ಷದ ಅಧ್ಯಕ್ಷರು, ವಿಧಾನಸಭೆ ಸ್ಪೀಕರ್, ವಿರೋಧ ಪಕ್ಷಗಳ ಇಬ್ಬರು ನಾಯಕರು ಹಾಗೂ ಹೈಕೋರ್ಟ್ ಮುಖ್ಯ ನಾಯಮೂರ್ತಿಗಳೊಂದಿಗೆ ಚರ್ಚಿಸಿ, ಎಲ್ಲರ ಸಲಹೆ ಪಡೆದು ಲೋಕಾಯುಕ್ತಕ್ಕೆ ಹೊಸ ಹೆಸರು ಸೂಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry