ಲೋಕಾಯುಕ್ತ ನೇಮಕ: ಗುಜರಾತ್ ಮೇಲ್ಮನವಿ ಅಂಗೀಕರಿಸಿದ ಸುಪ್ರೀಂ

7

ಲೋಕಾಯುಕ್ತ ನೇಮಕ: ಗುಜರಾತ್ ಮೇಲ್ಮನವಿ ಅಂಗೀಕರಿಸಿದ ಸುಪ್ರೀಂ

Published:
Updated:

ನವದೆಹಲಿ (ಪಿಟಿಐ) ಲೋಕಾಯುಕ್ತರಾಗಿ ನ್ಯಾಯಮೂರ್ತಿ (ನಿವೃತ್ತ) ಆರ್. ಎ. ಮೆಹ್ತಾ  ಅವರನ್ನು ಏಕಪಕ್ಷೀಯವಾಗಿ ನೇಮಕ ಮಾಡಿದ ರಾಜ್ಯದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಗುಜರಾತ್ ಸರ್ಕಾರವು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಅಂಗೀಕರಿಸಿತು.ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಜೆ.ಎಸ್. ಖೇಹರ್ ಅವರನ್ನು ಒಳಗೊಂಡ ಪೀಠವು ~ವಿಸ್ತೃತ ಸಾಂವಿಧಾನಿಕ ಪ್ರಶ್ನೆ ಒಳಗೊಂಡಿರುವುದರಿಂದ ವಿಷಯವನ್ನು ವಿಸ್ತಾರವಾಗಿ ಪರಿಶೀಲಿಸುವುದಾಗಿ~ ಹೇಳಿತು.ಫೆಬ್ರುವರಿ 20ರಿಂದ ಮೂರುದಿನಗಳ ಕಾಲ ವಿಷಯವನ್ನು ಆಲಿಸುವುದಾಗಿ ಪೀಠವು ತಿಳಿಸಿತು.

ಜಸ್ಟೀಸ್ ಮೆಹ್ತಾ ಅವರನ್ನು ಲೋಕಾಯುಕ್ತರಾಗಿ ನೇಮಕ ಮಾಡಿದ್ದನ್ನು ಎತ್ತಿ ಹಿಡಿದ ರಾಜ್ಯ ಹೈಕೋರ್ಟ್ ಆದೇಶವನ್ನು ಗುಜರಾತ್ ಸರ್ಕಾರವು ಪ್ರಶ್ನಿಸಿದೆ. ಈ ನೇಮಕಾತಿಯನ್ನು ತನ್ನ ಒಪ್ಪಿಗೆ ರಹಿತವಾಗಿ ಮಾಡಲಾಗಿದ್ದು ಇದು ಸಂವಿಧಾನವಿರೋಧಿ ಎಂಬ ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಕೋರ್ಟಿಗೆ ಒಯ್ದಿದೆ.ಲೋಕಾಯುಕ್ತರಾಗಿ ಜಸ್ಟೀಸ್ ಮೆಹ್ತಾ ಅವರ ನೇಮಕಾತಿಯನ್ನು ಜನವರಿ 18ರಂದು ಎತ್ತಿ ಹಿಡಿದಿದ್ದ ಗುಜತಾತ್ ಹೈಕೋರ್ಟ್ ~ಮೋದಿ ಅವರ ~ಹುಚ್ಚಾಟ~ವು ಕಿರು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ~ ಎಂದು ಕಟುವಾಗಿ ಟೀಕಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry