ಲೋಕಾಯುಕ್ತ ನೇಮಕ: ಹೈಕೋರ್ಟ್ ನ್ಯಾಯಮೂರ್ತಿಗಳಲ್ಲೇ ಭಿನ್ನಮತ

7

ಲೋಕಾಯುಕ್ತ ನೇಮಕ: ಹೈಕೋರ್ಟ್ ನ್ಯಾಯಮೂರ್ತಿಗಳಲ್ಲೇ ಭಿನ್ನಮತ

Published:
Updated:

ಅಹಮದಾಬಾದ್, (ಪಿಟಿಐ): ಕಳೆದ ಹಲವು ತಿಂಗಳಿನಿಂದ ವಿವಾದ ಸೃಷ್ಟಿಸಿ ಹೈಕೋರ್ಟ್ ಮುಂದಿರುವ ಗುಜರಾತ್ ಲೋಕಾಯುಕ್ತರ ನೇಮಕ ವಿಚಾರ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಲ್ಲೇ ಭಿನ್ನಮತ ಹುಟ್ಟು ಹಾಕಿದೆ!

ಲೋಕಾಯುಕ್ತರನ್ನು ನೇಮಕ ಮಾಡುವ ರಾಜ್ಯಪಾಲರ ತೀರ್ಮಾನವನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ಒಬ್ಬ ನ್ಯಾಯಮೂರ್ತಿ ಎತ್ತಿ ಹಿಡಿದರೆ, ಮತ್ತೊಬ್ಬ ನ್ಯಾಯಮೂರ್ತಿ ಇದಕ್ಕೆ ವಿಭಿನ್ನವಾದ ಆದೇಶ ನೀಡಿದ್ದಾರೆ. ನ್ಯಾಯಮೂರ್ತಿ ಆರ್.ಎನ್. ಮೆಹ್ತಾ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಿ ರಾಜ್ಯಪಾಲರಾದ ಕಮಲಾ ಬೆನಿವಾಲ್ ಅವರು ಆದೇಶ ಹೊರಡಿಸಿದ್ದರು.

ಈ ನಿರ್ಧಾರವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಕಿಲ್ ಖುರೇಶಿತಳ್ಳಿಹಾಕಿದ್ದಾರೆ.  ಅನೇಕ ವರ್ಷಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದ್ದು, ಇದು ಸರಿಯಲ್ಲ ಎಂದು ಖುರೇಷಿ ಅಭಿಪ್ರಾಯಪಟ್ಟರು. ಆದರೆ, ಇದಕ್ಕೆ ಒಪ್ಪದ ಮತ್ತೊಬ್ಬ ನ್ಯಾಯಮೂರ್ತಿ ಸೋನಿಯಾ ಗೋಕಾನಿ, ಇದಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಇಲ್ಲ ಎಂದರು. ಅವರು ತಮ್ಮ ಆದೇಶದ ಪ್ರತಿಯನ್ನು ಓದಲು ಆರಂಭಿಸುತ್ತಿದ್ದಂತೆಯೇ ನ್ಯಾಯಾಲಯ ಕಲಾಪದ ವೇಳೆ ಮುಗಿಯಿತು. ಹೀಗಾಗಿ ಆದೇಶದ ಪೂರ್ಣಪಾಠ ಮಂಗಳವಾರ ಲಭ್ಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry