ಬುಧವಾರ, ಏಪ್ರಿಲ್ 14, 2021
23 °C

ಲೋಕಾಯುಕ್ತ ಬಲೆಗೆ ಪ್ರಥಮ ದರ್ಜೆ ಸಹಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಎನ್.ಎನ್. ಗಾಯಕವಾಡ ಅವರ ನಿವಾಸದ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.`ದಾಳಿಯ ಕಾಲಕ್ಕೆ ಅಂದಾಜು ರೂ 1.25 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ~ ಎಂದು ದಾಳಿಯ ನೇತೃತ್ವ ವಹಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ವಿ.ಬಿ. ಮಡಿವಾಳರ ತಿಳಿಸಿದರು.`500 ಗ್ರಾಂ ಚಿನ್ನ, ಬೆಳ್ಳಿಯ ಆಭರಣ, ರೂ 3200 ನಗದು, 51 ಲಕ್ಷ ರೂಪಾಯಿ ಬೆಲೆ ಬಾಳುವ ಹವಳ, ಮುತ್ತು, ರೂ 40 ಲಕ್ಷ ಮೌಲ್ಯದ ಮನೆ, 26 ಲೀಟರ್ ವಿದೇಶಿ ಮದ್ಯ, ರೂ 5 ಲಕ್ಷ ವೆಚ್ಚದ ಜಿಮ್, ಒಂದು ಇನೊವಾ ಕಾರು, ಬೈಕ್, ಸ್ಕೂಟಿ, 5 ಲಕ್ಷ ಮೌಲ್ಯದ ಒಂದು ನಿವೇಶನ~ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.`ಇವರ ಮನೆಯಲ್ಲಿ ಐದು ಕೊಠಡಿಗಳಿದ್ದು, ಐದೂ ಕೊಠಡಿಯಲ್ಲಿ ಎಲ್‌ಸಿಡಿ ಟಿವಿ ಅಳವಡಿಸಲಾಗಿದೆ.ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಕೈಗಳಲ್ಲಿದ್ದ ಉಂಗುರಗಳನ್ನು ಜಫ್ತಿ ಮಾಡಲಾಗಿದೆ. ಮನೆಯ ಎದುರು ಐದು ವಾಣಿಜ್ಯ ಮಳಿಗೆ ಸಹ ಇವೆ. ಜಮೀನು ಹಾಗೂ ಜೀವ ವಿಮೆಯ ದಾಖಲೆಗಳ ಪತ್ತೆ ಕಾರ್ಯ ನಡೆದಿದೆ~ ಎಂದರು.ಎನ್.ಎನ್. ಗಾಯಕವಾಡ ಇಲ್ಲಿಯ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತ್ದ್ದಿದಾರೆ. ಅವರ ಮನೆಯವರು ರಾಶಿ ಫಲದ ಹರಳು, ಹವಳದ ವ್ಯಾಪಾರ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಪ್ರಭಾರ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಯ್ಯ ಮಾರ್ಗದರ್ಶನದಲ್ಲಿ  ಲೋಕಾಯುಕ್ತ ಡಿವೈಎಸ್ಪಿ ವಿ.ಬಿ. ಮಡಿವಾಳರ, ಇನ್‌ಸ್ಪೆಕ್ಟರ್‌ಗಳಾದ ರವೀಂದ್ರ ಕುರುಬಗಟ್ಟಿ, ಚಂದ್ರಕಾಂತ ಹಾಗೂ ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.                   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.