ಮಂಗಳವಾರ, ನವೆಂಬರ್ 19, 2019
21 °C

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು

Published:
Updated:

ಬೆಂಗಳೂರು (ಪಿಟಿಐ): ಕಬ್ಬನ್ ಪಾರ್ಕ್ ವಿಭಾಗದ ಎ.ಸಿ.ಪಿ ಎಚ್.ಕೆ. ವೆಂಕಟಸ್ವಾಮಿ, ಮೈಕೊ ಲೇಔಟ್ ವಿಭಾಗದ ಎ.ಸಿ.ಪಿ ವೀರಭದ್ರೇಗೌಡ, ಹುಳಿಮಾವು ಠಾಣೆಯ ಇನ್‌ಸ್ಪೆಕ್ಟರ್ ಜಯರಾಮ ಅವರು ಆಸ್ತಿ ದಾಖಲೆಗಳನ್ನು ತಿರುಚಿದ್ದಾರೆ ಎಂದು ಆರೋಪಿಸಿ, ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.ವೆಂಕಟಸ್ವಾಮಿ ಅವರ ಸೋದರ ಸಂಬಂಧಿ ಎಂ. ಉಮೇಶ್ ಎಂಬುವರು ಸಲ್ಲಿಸಿರುವ ದೂರಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಇದೇ 12ಕ್ಕೆ ಮುಂದೂಡಿದ್ದಾರೆ.

ಪ್ರತಿಕ್ರಿಯಿಸಿ (+)