ಲೋಕಾಯುಕ್ತ: ಸಿದ್ದರಾಮಯ್ಯ ಪ್ರಸ್ತಾವ- ಸಿಎಂ ನಕಾರ

7

ಲೋಕಾಯುಕ್ತ: ಸಿದ್ದರಾಮಯ್ಯ ಪ್ರಸ್ತಾವ- ಸಿಎಂ ನಕಾರ

Published:
Updated:

ಸುಳ್ಯ: ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಳಿಕೊಂಡಿರುವಂತೆ ವಿವಿಧ ಪಕ್ಷಗಳ ಸಭೆ ಕರೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

`ಲೋಕಾಯುಕ್ತ ನೇಮಕಕ್ಕೆ ಮೊದಲು ಸಭೆ ಕರೆಯಬೇಕೆಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ಈ ವಿಚಾರದಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕಲು ನಾನು ಸಿದ್ಧನಿಲ್ಲ. ಅವರಿಗೆ ಹಾಗೆ ಹೇಳಿ ಪತ್ರವನ್ನೂ ಬರೆಯಲಾಗಿದೆ ಮತ್ತು ಸೂಕ್ತ ವ್ಯಕ್ತಿಯ ಹೆಸರು ಸೂಚಿಸಲು ತಿಳಿಸಲಾಗಿದೆ. ಉತ್ತರ ಇನ್ನೂ ಬಂದಿಲ್ಲ. ಅವರು ಸೂಚಿಸುವ ಹೆಸರನ್ನೂ ಪರಿಶೀಲಿಸಲಾಗುವುದು~ ಎಂದು ತಿಳಿಸಿದರು.

ಲೋಕಾಯುಕ್ತ ನೇಮಕ ಸಂಬಂಧ ಈವರೆಗೂ ಮುಖ್ಯ ನ್ಯಾಯಮೂರ್ತಿಗಳಿಂದ ಯಾವ ಪ್ರಸ್ತಾವ ಬಂದಿಲ್ಲ. ಅದು ಬಂದ ನಂತರ ಸ್ಪೀಕರ್ ಮತ್ತು ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry