ಲೋಕೇಶ್‌ಗೆ ಸ್ವರ್ಣ ಡಬಲ್

7

ಲೋಕೇಶ್‌ಗೆ ಸ್ವರ್ಣ ಡಬಲ್

Published:
Updated:
ಲೋಕೇಶ್‌ಗೆ ಸ್ವರ್ಣ ಡಬಲ್

ಮೈಸೂರು: ವೃತ್ತಿಯಿಂದ ಎಂಜಿನಿಯರ್ ಆಗಿರುವ ಮೈಸೂರಿನ ಎನ್. ಲೋಕೇಶ್ ಮಂಗಳವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಜಿಮ್ನಾಸ್ಟಿಕ್ಸ್‌ನ ಪುರುಷರ ವಿಭಾಗದಲ್ಲಿ ಸ್ವರ್ಣ ಡಬಲ್ ಸಾಧನೆ ಮಾಡಿದರು.ಬೆಳಿಗ್ಗೆ ನಡೆದ ರಿಂಗ್ಸ್ ಕಸರತ್ತಿನಲ್ಲಿ 12.35 ಅಂಕಗಳನ್ನು ಗಳಿಸಿದ ಲೋಕೇಶ್ ಬೆಳಗಾವಿ ವಿಭಾಗದ ಶ್ಯಾಮರಾವ್ ಪವಾರ್ ಮತ್ತು ಮೆಹಬೂಬ್ ಹಂಚಿನಾಳ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದರು.ಸಂಜೆ ನಡೆದ ಫ್ಲೋರ್ ಎಕ್‌ಸ್ಜ್‌ನಲ್ಲಿ ಚುರುಕಿನ ಪ್ರದರ್ಶನ ನೀಡಿದ ಲೋಕೇಶ್ 12.10 ಅಂಕಗಳೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಬೆಳಗಾವಿ ವಿಭಾಗದ ಪ್ರತಿಭಾನ್ವಿತ ಜಿಮ್ನಾಸ್ಟ್ ಶ್ಯಾಮರಾವ್ ಪವಾರ್ 12.90 ಅಂಕ ಗಳಿಸಿ ಟೇಬಲ್ ವಾಲ್ಟ್ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗದ ಎಂ. ಕಾವ್ಯಾ ಚಿನ್ನ ಗೆದ್ದರೆ, ಬೆಂಗಳೂರು ಗ್ರಾಮಾಂತರ ವಿಭಾಗದ ಅರ್ಚನಾ ಬೆಳ್ಳಿ ಮತ್ತು ನಗರದ ಎಂ. ಸ್ಮಿತಾ ಕಂಚು ಪಡೆದುಕೊಂಡರು.ಫಲಿತಾಂಶಗಳು: ಪುರುಷರು: ರಿಂಗ್ಸ್: ಎನ್. ಲೋಕೇಶ್ (ಮೈಸೂರು)-1, ಶ್ಯಾಮರಾವ್ ಪವಾರ್ (ಬೆಳಗಾವಿ)-2, ಮೆಹಬೂಬ್ ಹಂಚಿನಾಳ (ಬೆಳಗಾವಿ)-3; ಅಂಕಗಳು: 12.35.ಟೇಬಲ್ ವಾಲ್ಟ್: ಶ್ಯಾಮರಾವ್ ಪವಾರ್ (ಬೆಳಗಾವಿ)-1, ಸಿದ್ಧಾರೂಢ ಕೈನಡಗು (ಬೆಳಗಾವಿ)-2, ಎನ್. ಲೋಕೇಶ್ (ಮೈಸೂರು)-3.  ಅಂಕಗಳು: 12.90.ಫ್ಲೋರ್ ಎಕ್ಸ್ಯ್‌ಜ್: ಎನ್. ಲೋಕೇಶ್ (ಮೈಸೂರು)-1,  ಸಿದ್ಧಾರೂಢ ಕೈನಡಗು -2, ವಿಶ್ವನಾಥ್ ಜಾನಕಿ ಪಾಟೀಲ (ಬೆಳಗಾವಿ)-3.  ಅಂಕಗಳು: 12.10ಮಹಿಳೆಯರು: ಟೇಬಲ್ ವಾಲ್ಟ್: ಎಂ. ಕಾವ್ಯಾ (ಬೆಂಗಳೂರು ನಗರ)-1, ಅರ್ಚನಾ (ಬೆಂಗಳೂರು ಗ್ರಾಮಾಂತರ)-2, ಎಸ್. ಸ್ಮಿತಾ (ಬೆಂಗಳೂರು ನಗರ)-3 ಅಂಕಗಳು: 11.55. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry