ಲೋಕ ಅದಾಲತ್‌ನ ಸೌಲಭ್ಯ ಪಡೆಯಲು ಸಲಹೆ

7

ಲೋಕ ಅದಾಲತ್‌ನ ಸೌಲಭ್ಯ ಪಡೆಯಲು ಸಲಹೆ

Published:
Updated:
ಲೋಕ ಅದಾಲತ್‌ನ ಸೌಲಭ್ಯ ಪಡೆಯಲು ಸಲಹೆ

ಕಲಘಟಗಿ: `ಸಮಾಧಾನ ಮತ್ತು ಶೀಘ್ರ ಇತ್ಯರ್ಥಕ್ಕಾಗಿ ಸಂಧಾನ ಸೂಕ್ತ ಮಾರ್ಗವಾಗಿದ್ದು, ಲೋಕ ಅದಾಲತ್‌ನ ಸೌಲಭ್ಯ ಪಡೆಯುವಂತೆ' ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎನ್ ಸುಣಗಾರ ಸಲಹೆ ನೀಡಿದರು.ಅವರು ಸ್ಥಳೀಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತೆ ಸಂಚಾರಿ ರಥಕ್ಕೆ ಚಾಲನೆ ನೀಡಿ ಅದರ ಅಂಗವಾಗಿ ಜರುಗಿದ ಕಾನೂನು ಅರಿವು ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ, ತಾಲ್ಲೂಕು ಪಂಚಾಯ್ತಿ, ಅಭಿಯೋಜನಾ ಇಲಾಖೆ, ಮಹಿಳಾ ಮತ್ತು             ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರಕ್ಷಕ ಇಲಾಖೆ ಇವುಗಳ  ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಮಂಜನಾಥ ಚೌಧರಿ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ನಾಗೇಶ, ಹಿರಿಯ ವಕೀಲರಾದ ಬಿ.ವಿ. ಪಾಟೀಲ, ಜಿ.ಬಿ. ಕರ್ಲಟ್ಟಿ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ  ವಿ.ಬಿ ಶಿವನಗೌಡ್ರ, ಎಸ್.ಟಿ. ತೆಗ್ಗಿಹಳ್ಳಿ, ಎಸ್.ಜೆ. ಸುಕಂದ, ಎಂ.ಎಂ ಚಲವಾದಿ, ಆರ್.ಎಸ್. ಉಡಪಿ ಜಿ.ಬಿ ನೇಕಾರ, ಅಣ್ಣಪ್ಪ ಓಲೇಕಾರ, ಎನ್.ಎಂ. ಇಂಗಳಗಿ, ಆರ್.ವೈ. ರೊಳ್ಳಿ, ರಾಕೇಶ ಅಳಗವಾಡಿ, ರೇಣುಕಾ ಪಾಟೀಲ, ಸೀಮಾ ಪಾಟೀಲ ಪಾಲ್ಗೊಂಡರು. ಮಂಜುನಾಥ ಧನಿಗೊಂಡ ನಿರೂಪಿಸಿದರು. ಕೆ.ಬಿ. ಗುಡಿಹಾಳ ವಂದಿಸಿದರು.ಪ್ರವೇಶ ಪತ್ರ ಪಡೆಯಲು ಸೂಚನೆಧಾರವಾಡ: ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಕೇಂದ್ರ ಕಚೇರಿಯಿಂದ ಬಿಡುಗಡೆ ಮಾಡಿರುವ ಪ್ರವೇಶ ಪತ್ರಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು  ಫೆಬ್ರವರಿ 15ರಂದು ಪ್ರವೇಶ ಪತ್ರಗಳನ್ನು ನಗರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಿಂದ ಪಡೆಯಲು ಉಪನಿರ್ದೇಶಕ ರವೀಂದ್ರ ರಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry