ಲೋಪವಿಲ್ಲ: ಸಚಿವರ ಸಮರ್ಥನೆ

7

ಲೋಪವಿಲ್ಲ: ಸಚಿವರ ಸಮರ್ಥನೆ

Published:
Updated:

ಹಾಸನ: `ನ್ಯಾ. ಚಂದ್ರಶೇಖರಯ್ಯ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿರುವುದರಲ್ಲಿ ಲೋಪ ಆಗಿಲ್ಲ. ಎಲ್ಲ ನಿಯಮಗಳನ್ನೂ ಸರಿಯಾಗಿ ಪಾಲಿಸಲಾಗಿದೆ~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶಕುಮಾರ್ ಸಮರ್ಥಿಸಿಕೊಂಡರು.ಸಮೀಪದ ಆಲೂರಿನಲ್ಲಿ  ನಿರ್ಮಿಸಿರುವ ನ್ಯಾಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ಉಪ ಲೋಕಾಯುಕ್ತರ ನೇಮಕಕ್ಕೆ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆಯಬೇಕು ಎಂಬ ನಿಯಮವಿದೆ. ಆದರೆ ಇದಕ್ಕೆ ಹಲವು ವ್ಯಾಖ್ಯಾನಗಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಸಲಹೆ ಪಡೆಯಲಾಗಿದೆ. ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ~ ಎಂದರು.`ಚಂದ್ರಶೇಖರಯ್ಯ ಅವರ ನೇಮಕ ಆಗಿರುವುದರಿಂದ ಹುದ್ದೆಯಿಂದ ಅವರನ್ನು ಕಿತ್ತುಹಾಕಲು ಬರುವುದಿಲ್ಲ. ತೆಗೆಯಲೇಬೇಕಾಗಿದ್ದರೆ ಮುಂದಿನ ಅಧಿವೇಶನದಲ್ಲಿ ದೋಷಾರೋಪ ಮಾಡಿ ಅವರನ್ನು ತೆಗೆಯಬೇಕಾಗುತ್ತದೆ. ಅಂಥ ಆಲೋಚನೆ ಸರ್ಕಾರಕ್ಕೆ ಇಲ್ಲ~ ಎಂದು ಸಚಿವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry