ಲ್ಯಾಕ್ಮೆ ಜಾಹೀರಾತಿನಲ್ಲಿ ಕರೀನಾ ಕಪೂರ್

7

ಲ್ಯಾಕ್ಮೆ ಜಾಹೀರಾತಿನಲ್ಲಿ ಕರೀನಾ ಕಪೂರ್

Published:
Updated:
ಲ್ಯಾಕ್ಮೆ ಜಾಹೀರಾತಿನಲ್ಲಿ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್ `ಲ್ಯಾಕ್ಮೆ ಆಬ್ಸಲ್ಯೂಟ್~ ಹೊಸ ಮೇಕಪ್ ಶ್ರೇಣಿಯ ಪ್ರಚಾರ ರಾಯಭಾರಿಯಾಗಿ  ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.16 ಗಂಟೆಗಳ ಅವಧಿ ಉಳಿಯುವ ನೂತನ ಮೇಕಪ್ ಶ್ರೇಣಿಯನ್ನು ಲ್ಯಾಕ್ಮೆ ಕಂಪೆನಿ ಬಿಡುಗಡೆಗೊಳಿಸಿದ್ದು, ಅದರ ಜಾಹೀರಾತಿನಲ್ಲಿ ಕರೀನಾ ಮೂಡಿಬರಲಿದ್ದಾರೆ. ಭಾರತೀಯ ಸ್ತ್ರೀಯರ ಚರ್ಮಕ್ಕೆ ಅನುಗುಣವಾಗಿ ಈ ಉತ್ಪನ್ನವನ್ನು ಹೊರತರಲಾಗಿದೆ, ಪ್ರತಿಯೊಬ್ಬ ಮಹಿಳೆಗೂ ತಾನು ಸುಂದರವಾಗಿ ಕಾಣುವ ಬಯಕೆಯಿರುತ್ತದೆ. ಅದಕ್ಕೆಂದೇ ಲ್ಯಾಕ್ಮೆ ಈ ಹೊಸ ಮೇಕಪ್ ಶ್ರೇಣಿ ಹೊರತಂದಿದೆ ಎಂದರು ಲ್ಯಾಕ್ಮೆ ನಿರ್ದೇಶಕಿ ಫರೀದಾ ಕಾಲಿಯದನ್.`ಲ್ಯಾಕ್ಮೆ ಒಂದು ಬ್ರ್ಯಾಂಡ್ ಆಗಿ ಭಾರತೀಯ ಸ್ತ್ರೀ ಸೌಂದರ್ಯದ ಅಗತ್ಯ ಅರ್ಥ ಮಾಡಿಕೊಂಡಿದೆ. ಲ್ಯಾಕ್ಮೆ ಆಬ್ಸಲ್ಯೂಟ್ ಮೂಲಕ ಇಡೀ ದಿನ ಗ್ಲಾಮರಸ್ ಆಗಿ ಕಾಣಬಹುದು, ಭಾರತೀಯ ವಾತಾವರಣಕ್ಕೆ ಇದು ತಕ್ಕುದಷ್ಟೇ ಅಲ್ಲ, ಇದರಲ್ಲಿ ಚರ್ಮಕ್ಕೆ ಅನುಕೂಲವಾಗುವ ಎಸ್‌ಪಿಎಫ್, ವಿಟಮಿನ್ ಬಿ3 ಕೂಡ ಇದೆ.ಈ ಜಾಹೀರಾತಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಕಾತುರಳಾಗಿದ್ದೇನೆ~ ಎಂದಿದ್ದಾರೆ ಕರೀನಾ ಕಪೂರ್.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry